ಉಡುಪಿ ಹೊಟೇಲ್ ಉದ್ಯಮ ತೀವೃ ಸಂಕಷ್ಟಕ್ಕೆ: ಜಿಲ್ಲಾಧಿಕಾರಿಗಳಿಗೆ ಮನವಿ
ಉಡುಪಿ: ಕೊರೋನಾ ಲಾಕ್ ಡೌನ್‌ನಿಂದ ಜಿಲ್ಲೆಯ ಹೊಟೇಲ್ ಉದ್ಯಮವು ತೀವೃ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷರಾದ ಡಾ. ತಲ್ಲೂರ್ ಶಿವರಾಮ್ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೂನ್ 8 ರಿಂದ ಮತ್ತೆ ಹೊಟೇಲ್ ಪ್ರಾರಂಭವಾದರೂ ಶೇ. 20 ರಷ್ಟು ವ್ಯಾಪಾರವಿಲ್ಲದೆ ಉದ್ಯಮವು ಸಂಕಷ್ಟದಲ್ಲಿದ್ದು, ಕಟ್ಟಡದ ಬಾಡಿಗೆ, ಸಿಬಂದಿಗಳ ಸಂಬಳ, ವಿದ್ಯುತ್ ಬಿಲ್, ಜಿ.ಎಸ್. ಟಿ. ಮೊದಲಾದ ತೆರಿಗೆಗಳಿಂದ ಹೊಟೇಲ್ ಉದ್ಯಮ ಮುಚ್ಚುವ ಪರಿಸ್ಥಿತಿಯಲ್ಲಿದೆ. ಇದರ ನಡುವೆ ಸಿಬಂದಿಗಳ ಕೊರೋನಾ ಪಾಸಿಟಿವ್ ನಿಂದಾಗಿ ಹೊಟೇಲ್‌ಗೆ ಗ್ರಾಹಕರು ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸೀಲ್ ಡೌನ್ ಪ್ರಕ್ರಿಯೆಯನ್ನು ಎರಡು ದಿನಕ್ಕೆ ಸಿಮೀತಗೊಳಿಸಲು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಅತೀಯಾದ ತೆರಿಗೆ ಏರಿಕೆ, ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ನಮ್ಮ ಉದ್ಯಮವು ಕುಸಿದಿದೆ ಇದೆಲ್ಲದರ ನಡುವೆ ನಗರದಲ್ಲಿ ಮೊಬೈಲ್ ಕ್ಯಾಂಟೀನ್‌ಗಳು ಯಾವುದೇ ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸದೆ ಕಾರ್ಯಚರಿಸುತ್ತಿದೆ.
ಇದರ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ದೂರು ನೀಡಲಾಗಿದ್ದರೂ ಇವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ನಿಯೋಗದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ನಾಗೇಶ್ ಭಟ್, ಉಪಾಧ್ಯಕ್ಷರಾದ ಡಯಾನ ವಿಠಲ್ ಪೈ, ಲಕ್ಷ್ಮಣ್ ಜಿ. ನಾಯಕ್, ವ್ಯವಸ್ಥಾಪಕ ಅಶೋಕ್ ಬಿ. ಪೈ, ಶ್ರೀಧರ್ ಭಟ್, ಕಾಶಿರಾಮ್ ಪೈ, ಸಂದೀಪ್ ನಾಯಕ್, ಶಿವಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ದಿಲ್ಲೇಶ್ ಶೆಟ್ಟಿ, ವಿಲಾಸ್ ಉಪಸ್ಥಿತರಿದ್ದರು.