ಮಣಿಪಾಲ: ಆಸ್ಪತ್ರೆ ಸಿಬಂದಿಗೆ ಕೊರೋನಾ ಪಾಸಿಟಿವ್, ಪರ್ಕಳದ ಮನೆ ಸೀಲ್ ಡೌನ್

ಮಣಿಪಾಲ: (ಉಡುಪಿ ಟೈಮ್ಸ್ ವರದಿ) ಆಸ್ಪತ್ರೆಯ ಸ್ವಚ್ಚತಾ ಸಿಬಂದಿಗೆ ಕೊರೋನಾ ಸೋಂಕು ಪಾಸಿಟಿವ್ ಧೃಢಪಟ್ಟಿದ್ದು, ಅವರು ವಾಸಿಸುವ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಪರ್ಕಳದ ಶೆಟ್ಟಿಬೆಟ್ಟಿನ ಬೊರ್ಬ್ಬರ್ಯ ದೈವಸ್ಥಾನದ ಬಳಿಯ ನಿವಾಸಿ 52 ವರ್ಷದ ಮಹಿಳೆಯೊರ್ವರಿಗೆ ಸೋಂಕು ಧೃಢ ಪಟ್ಟಿದ್ದರಿಂದ ಮಹಿಳೆ ವಾಸಿಸುವ ಬಾಡಿಗೆ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕೆಲವೊಂದು ಆಸ್ಪತ್ರೆಗಳಲ್ಲಿ ಸಿಬಂದಿಗಳಿಗೆ ಕೊರೋನಾ ಸೋಂಕು ಹರಡದಂತೆ ಧರಿಸುವ ಕಿಟ್‌ಗಳನ್ನು ನೀಡದೆ ಕೆಲಸ ನಿರ್ವಹಿಸಲು ಸೂಚಿಸುತ್ತಿರುವುದಾಗಿ ಸಿಬಂದಿಗಳು ದೂರಿಕೊಂಡಿದ್ದಾರೆ.

ಈ ಮೊದಲು ಕೊರೋನಾ ಸೋಂಕಿತ ಮುಂಬೈನ ವ್ಯಕ್ತಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾಗ, ಅಲ್ಲಿನ ಸ್ವಚ್ಚತಾ ಸಿಬಂದಿಗಳಿಗೆ ಧರಿಸಲು ಯಾವುದೇ ಕಿಟ್ ನೀಡದೆ ಇದ್ದುದ್ದರಿಂದ ಅಲ್ಲಿನ ಸಿಬಂದಿಗಳಿಗೆ ಸೋಂಕು ಹರಡಿತ್ತೆಂದು ದೂರು ಕೇಳಿ ಬಂದಿತ್ತು.

1 thought on “ಮಣಿಪಾಲ: ಆಸ್ಪತ್ರೆ ಸಿಬಂದಿಗೆ ಕೊರೋನಾ ಪಾಸಿಟಿವ್, ಪರ್ಕಳದ ಮನೆ ಸೀಲ್ ಡೌನ್

  1. Covid 19, fighting employees in the hospitals should be given the Kit for wearing during the work for protecting them selves. Strict and immediate action should be taken regarding this by all the concerned authorities.

Leave a Reply

Your email address will not be published. Required fields are marked *

error: Content is protected !!