ಮಣಿಪಾಲ: ಎಪಿಐ ಕರ್ನಾಟಕ ಚಾಪ್ಟರ್ ವಾರ್ಷಿಕ ಸಮ್ಮೇಳನ- ಕಾಪಿಕಾನ್ 2020-21
ಮಣಿಪಾಲ ಸೆ.21(ಉಡುಪಿ ಟೈಮ್ಸ್ ವರದಿ): ಎಪಿಐ ಉಡುಪಿ ಮಣಿಪಾಲ ಚಾಪ್ಟರ್ ಮತ್ತು ಕೆಎಂಸಿ ಮಣಿಪಾಲ ವೈದ್ಯಕೀಯ ವಿಭಾಗ ಮಾಹೆ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಎಪಿಐ ಕರ್ನಾಟಕ ಚಾಪ್ಟರ್ ವಾರ್ಷಿಕ ಸಮ್ಮೇಳನ-ಕಾಪಿಕಾನ್ 2020-21 ಸೆ.18 ರಂದು ಮಣಿಪಾಲದಲ್ಲಿ ನಡೆಯಿತು.
ಉದಯೋನ್ಮುಖ ಸವಾಲುಗಳಿಗೆ ವೈದ್ಯರನ್ನು ಸಬಲೀಕರಣಗೊಳಿಸುವುದು ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದ ಸಮ್ಮೇಳನ ವನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ ವೆಂಕಟೇಶ್, ಸಹ ಕುಲಪತಿ (ಆರೋಗ್ಯ ವಿಜ್ಞಾನ )ಗಳಾದ ಡಾ.ಪಿ ಎಲ್ ಎನ್.ಜಿ ರಾವ್, ಕೆ.ಎಂ.ಸಿ ಡೀನ್ ಡಾ. ಶರತ್ ಕೆ ರಾವ್ ಗೌರವ ಅಥಿತಿಗಳಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಡಾ. ಶರತ್ ಕೆ, ರಾವ್, ಕರ್ನಾಟಕ ಎ.ಪಿ.ಐ ಚಾಪ್ಟರ್ ನ ಮುಖ್ಯಸ್ಥರಾದ ಡಾ.ವಿ.ಎ ಕೋಥಿವಾಳೆ, ಚುನಾಯಿತ ಕಾಪಿಕಾನ್ 2020-21ರ ವಿಜ್ಞಾನ ಸಮಿತಿಯ ಮುಖ್ಯಸ್ಥ ಡಾ.ಎಚ್.ಕೆ ರಾಜಶೇಖರ್, ಕರ್ನಾಟಕ ಎಪಿಐ ಚಾಪ್ಟರ್’ನ ಕಾರ್ಯದರ್ಶಿ ಗಳಾದ ಡಾ.ಎಂ ನಾರಾಯಣಸ್ವಾಮಿ, ಕಾಪಿಕಾನ್ 2020-21ರ ಸಂಘಟನಾ ಮುಖ್ಯಸ್ಥರಾದ ಡಾ.ಸುಧಾ ವಿದ್ಯಾಸಾಗರ್ ಸಂಘಟನಾ ಕಾರ್ಯದರ್ಶಿ ಡಾ.ಶಿವಶಂಕರ್ ಕೆ.ಎನ್, ಜೊತೆ ಕಾರ್ಯದರ್ಶಿಗಳಾದ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ರವಿರಾಜ್ ಆಚಾರ್ಯ, ಆದರ್ಶ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.