ಬಿ.ವಿ.ಕಾರಂತರು ರಂಗಭೂಮಿ ಮತ್ತು ರಂಗಸಂಗೀತಕ್ಕೆ ನೀಡಿದ ಕೊಡುಗೆ ಅಪಾರ-ಕುಮಾರ್ ಬೆಕ್ಕೇರಿ

ಬ್ರಹ್ಮಾವರ: ಬಿ.ವಿ.ಕಾರಂತರು ರಂಗ ಜಂಗಮನಂತೆ ಭಾರತ ದೇಶದಾದ್ಯಂತ ಸುತ್ತಿ ರಂಗಭೂಮಿಯನ್ನು ಬೆಳೆಸಿದ ಶ್ರೇಷ್ಠ ವ್ಯಕ್ತಿ. ಅವರು ರಂಗಭೂಮಿಗೆ ಮತ್ತು ರಂಗಸಂಗೀತಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯ ನಿರ್ದೇಶಕರಾದ ಕುಮಾರ್ ಬೆಕ್ಕೇರಿ ಅವರು ಬಿ.ವಿ.ಕಾರಂತರನ್ನು ಸ್ಮರಿಸಿದರು. 

ಅವರು ಮಂದಾರ ಬೈಕಾಡಿ ಗಾಂಧಿನಗರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ರಂಗಾಯಣ ಮೈಸೂರು ಇವರು ಆಯೋಜಿಸಿದ್ದ ಭಾರತೀಯ ರಂಗಸಂಗೀತ ದಿನದ ‘ರಂಗನಮನ, ರಂಗಸಂಗೀತಧಾರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಬಿ.ವಿ.ಕಾರಂತರು ಕನ್ನಡ ರಂಗಭೂಮಿಯನ್ನು ಭಾರತೀಯ ರಂಗಭೂಮಿಯಲ್ಲಿ ಎತ್ತರದ ಸ್ಥಾನಕ್ಕೆ ಕೊಂಡೊಯ್ದವರು ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಈ ಕಾರ್ಯಕ್ರಮ ಯುವಜನತೆಯನ್ನ ಹವ್ಯಾಸಿ ರಂಗಭೂಮಿಯೆಡೆಗೆ ಆಸಕ್ತಿಯಿಂದ ಸೆಳೆಯಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ರಂಗಕರ್ಮಿ ಸತ್ಯನಾ ಕೊಡೇರಿ ಯವರು ಬಿ.ವಿ.ಕಾರಂತರ ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು. 

ಸಭಾಕಾರ್ಯಕ್ರಮದ ನಂತರ ರಂಗ ಕಲಾವಿದರಾದ ಸತ್ಯನಾ ಕೊಡೇರಿ, ಶಿವಾನಂದ ಕೋಟೇಶ್ವರ, ಪುನೀತ್ ಶೆಟ್ಟಿ ಕೋಟ ಇವರು ರಂಗಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಂದಾರದ ಯುವ ಕಲಾವಿದರು ಈ ಕಾರ್ಯಕ್ರಮದಲ್ಲಿ ಜೊತೆಯಾದರು. ರೋಹಿತ್ ಬೈಕಾಡಿ ಸ್ವಾಗತಿಸಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು, ಸಚಿನ್ ಅಂಕೋಲಾ ನಿರ್ವಹಿಸಿದರು. ಮಂದಾರದ ಪ್ರಸಾದ್ ಬ್ರಹ್ಮಾವರ, ರವಿ ಪೇತ್ರಿ, ಪ್ರಶಾಂತ್ ಮಲ್ಯಾಡಿ, ಲೋಹಿತ್ ಕೊಮೆ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!