ತಾಜುಲ್ ಫುಖಹಾ ಉಸ್ತಾದ್ ನಮ್ಮ ಶೈಖುನಾ ಬಾರ್ಕೂರು ಅನುಸ್ಮರಣಾ ಮಜ್ಲಿಸ್ ನಲ್ಲಿ ಖಾಝಿ ಮಾಣಿ ಉಸ್ತಾದ್

ಉಡುಪಿ:  ಮನೆಯನ್ನೇ ಖುತುಬು ಖಾನ ಮಾಡಿದ ಅರಿವಿನ ಲೈಬ್ರರಿ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ಅವರು ನಮ್ಮ ಶೈಖುನಾ ಆಗಿದ್ದಾರೆ  ಯಾವುದೇ ಸಮಸ್ಯೆಗಳಿಗೂ,ಸಂಶಯಗಳಿಗೂ ಅಂತಿಮ ತೀರ್ಪು ಅವರದ್ದಾಗಿತ್ತು. ನಮ್ಮಿಂದ ಅಗಲಿ ಒಂದು ವರ್ಷ ಪೂರ್ತಿಯಾದರೂ ನಮಗೆ  ಅವರನ್ನು ಮರೆಯಲು ಸಾಧ್ಯನೇ ಇಲ್ಲ ಎಂದು ಖಾಝಿ ಶೈಖುನಾ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದರುಯಾವುದೇ ಸಮಸ್ಯೆಗಳಿಲ್ಲದ್ದರೂ ಸಲೀಸಾಗಿ ನಿಭಾಯಿಸುತ್ತಿದ್ದರು,ಅವರು ನೀಡಿದ ಯಾವುದೇ ಫತ್ವಾ, ಪ್ರಕಟಣೆಗಳನ್ನು ತಿದ್ದುಪಡಿ ಮಾಡುವ ಅವಕಾಶ ಬಂದಿಲ್ಲ ಅಷ್ಟೊಂದು ಸೂಕ್ಷ್ಮತೆ ಹಾಗೂ ಗಾಂಭೀರ್ಯತೆ ಇತ್ತು ಎಂದುಪ್ರಾಸ್ತಾವಿಕವಾಗಿ ಮಾತನಾಡಿದ ಸುನ್ನೀ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹೇಳಿದರು.

ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲೆ ಇದರ ವತಿಯಿಂದ ಮಾಲಿಕಿಬ್ನು ದೀನಾರ್ ಜುಮಾ ಮಸೀದಿ ಬಾರ್ಕೂರು ನಲ್ಲಿ ಜರಗಿದ ತಾಜುಲ್ ಫುಖಹಾಅ ಖಾಝಿ ಪಿ ಎಮ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದರ ಪ್ರಥಮ ವಾರ್ಷಿಕ ಅನುಸ್ಮರಣಾ ಮಜ್ಲಿಸ್ ನ ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ವಹಿಸಿದ್ದರುರಾಜ್ಯ ಎಸ್ ವೈ ಎಸ್ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ರವರ ದುಆ ದೊಂದಿಗೆ ಚಾಲನೆ ಗೊಂಡ ಕಾರ್ಯಕ್ರಮದಲ್ಲಿ, ಕುರ್ ಆನ್ ಪಾರಾಯಣ, ತಹ್ಲೀಲ್ ಸಮರ್ಪಣೆ, ಅನುಸ್ಮರಣಾ ಭಾಷಣ ಹಾಗೂ ಸಾಮೂಹಿಕ ಪ್ರಾರ್ಥನಾ ಮಜ್ಲಿಸ್ ನಡೆಯಿತು.

ಸಹಾಯಕ ಖಾಝಿ ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ, ಅಸ್ಸಯ್ಯಿದ್ ಜುನೈದ್ ಅರ್ರಿಫಾಯಿ ತಂಙಳ್, ಸೆಯ್ಯಿದ್ ಸಾಮಿರ್ ತಂಙಳ್ , ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಅಬ್ದುಲ್ಲತೀಫ್ ಮದನಿ ಬಾರ್ಕೂರು, ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ,ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ, ಬಾರ್ಕೂರು ಮಸೀದಿ ಅಧ್ಯಕ್ಷ ಖಾಸಿಂ ಬಾರ್ಕೂರು , ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಮನ್ಸೂರ್ ಮೆಕ್ಕಾಸ್ ,ಹಂಝ ಕರ್ಕಿ ಗುಲ್ವಾಡಿ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರುಮಸೀದಿ ಸಮಿತಿ ವತಿಯಿಂದ ಖಾಝಿ ಮಾಣಿ ಉಸ್ತಾದ್, ಕೋಟೇಶ್ವರ ತಂಙಳ್ ಮತ್ತು ಡಾ ನೌಷಾದ್ ಕುಂಜಾಲು ರವರುಗಳಿಗೆ ಸನ್ಮಾನಿಸಲಾಯಿತು  ಕೆ ಎ ರಝ್ವಿ ಕಲ್ಕಟ್ಟ ಸ್ವಾಗತಿಸಿದರು ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಧನ್ಯವಾದ ಗೈದರು.

Leave a Reply

Your email address will not be published. Required fields are marked *

error: Content is protected !!