ವಿದೇಶಿ ಏಜೆನ್ಸಿಗಳಿಗೆ ಭಾರತದ ಫೋಟೋ ಕಳುಹಿಸುತ್ತಿದ್ದ ಆರೋಪಿಯ ಬಂಧನ
ಬೆಂಗಳೂರು ಸೆ.20: ವಿದೇಶಿ ಏಜೆನ್ಸಿಗಳಿಗೆ ಭಾರತದ ಪ್ರಮುಖ ಸ್ಥಳಗಳು, ಕಟ್ಟಡಗಳು, ರಕ್ಷಣಾ ಸಂಸ್ಥೆಗಳ ಫೋಟೋ ತೆಗೆದು ಕಳುಹಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದವನೆಂದು ಗುರುತಿಸಲಾಗಿದೆ. ಮಿಲಿಟರಿ ಇಂಟಲಿಜನ್ಸ್ ನೀಡಿದ ಮಾಹಿತಿ ಮೇರೆಗೆ ಈತನನ್ನು ಪೊಲೀಸರು ಬಂಧಿಸಿದ್ದು, ಅಫಿಷಿಯಲ್ ಸೀಕ್ರೆಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ದೇಶದ ವಿವಿಧೆಡೆಗಳಲ್ಲಿ ಈ ಕೃತ್ಯವೆಸಗಿದ್ದು, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.