ಸೌದಿ ಅರೆಬಿಯಾ: ಕೋವಿಡ್ ಸೋಂಕಿನ 70 ಹೊಸ ಪ್ರಕರಣ ಪತ್ತೆ
ರಿಯಾದ್, ಸೆ.20: ಸೌದಿ ಅರೆಬಿಯಾದಲ್ಲಿ ಕೋವಿಡ್ ಸೋಂಕಿನ 70 ಹೊಸ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ರಿಯಾದ್ ನಲ್ಲಿ 21, ಮಕ್ಕಾದಲ್ಲಿ 19, ಪೂರ್ವ ಪ್ರಾಂತ್ಯದಲ್ಲಿ 7, ಮದೀನಾದಲ್ಲಿ 6, ಆಸಿರ್ನಲ್ಲಿ 3, ಜಝಾನ್ನಲ್ಲಿ 2, ತಬೂಕ್, ಅಲ್-ಔಫ್, ಹೈಲ್ ಮತ್ತು ಅಲ್ಬಹಾದಲ್ಲಿ ತಲಾ 1 ಪ್ರಕರಣ ದಾಖಲಾಗಿವೆ.
ಶನಿವಾರದ ಬಳಿಕ ರವಿವಾರ ಸೋಂಕಿನಿಂದ ಮತ್ತೆ 5 ಮಂದಿ ಮೃತಪಟ್ಟಿದ್ದು,ಮೃತರ ಒಟ್ಟು ಸಂಖ್ಯೆ 8,661ಕ್ಕೇರಿದೆ. ಸೋಂಕಿನಿಂದ 81 ಮಂದಿ ಚೇತರಿಸಿಕೊಂಡಿದ್ದು ಈ ವರೆಗೆ ಒಟ್ಟು 5,35,531 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿ ಇದುವರೆಗೆ 40.6 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ಹೇಳಿದ್ದಾರೆ.