ಅದೆಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ದಿ.ಆಸ್ಕರ್ ಒಮ್ಮೆಯೂ ಪ್ರಚಾರ ಮಾಡಿದವರಲ್ಲ- ಪ್ರಮೋದ್ ಮಧ್ವರಾಜ್

ಉಡುಪಿ ಸೆ.18(ಉಡುಪಿ ಟೈಮ್ಸ್ ವರದಿ): ಇತ್ತೀಚೆಗೆ ಅಗಲಿದ ಕಾಂಗ್ರೆಸ್ ನ ಹಿರಿಯ ನಾಯಕ ದಿ.ಆಸ್ಕರ್ ಫರ್ನಾಂಡಿಸ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್ ಭವನದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಸಮಾಜಿಕ ಜೀವನದಲ್ಲಿ ಇಮ್ಯುಲೇಶನ್ ನನ್ನ ಜೀವನದಲ್ಲಿ ಅಳವಡಿಸಿ ಕೊಂಡವರು ಉತ್ತಮ ಸಾಧನೆ ಮಾಡಬಲ್ಲವರಾಗುತ್ತಾರೆ ಎಂಬುದಕ್ಕೆ ಆಸ್ಕರ್ ಫರ್ನಾಂಡಿಸ್ ಅವರು ಉದಾಹರಣೆ. ಆಸ್ಕರ್ ಫರ್ನಾಂಡಿಸ್ ಅವರು ಅಜಾತಶತ್ರು. ಅವರು ಯಾವುದೇ ದ್ವೇಷ, ವೈಷಮ್ಯ ಇಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಕಾಣುವವರು.  ರಾಷ್ಟ್ರ ಮಟ್ಟದ ನಾಯಕರಿಗೆ ಬಹಳ ಹತ್ತಿರ ಇದ್ದವರು. 

ರಾಜಿವ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಸಿಡಾಕ್ ಎಕ್ಸ್ ಚೇಂಜ್ ಎಂಬ ಯೋಜನೆ ದೇಶದ ಇತರ ಭಾಗಗಳಿಗೆ ತಲುಪುವುದಕ್ಕಿಂತ ಮೊದಲು ಉಡುಪಿಗೆ ತಂದುಕೊಟ್ಟವರು ಆಸ್ಕರ್ ಫರ್ನಾಂಡಿಸ್ ಅವರು. ವಾರಾಹಿ ಯೋಜನೆಯ  ಹಂತ ಹಂತದಲ್ಲಿಯೂ ಮುತುವರ್ಜಿ ವಹಿಸಿ 350 ಕೋಟಿ ರೂ. ಅನುದಾನ ಪಡೆಯುವಂತೆ ಮಾಡಿದವರು. ಚತುಷ್ಪತ ರಸ್ತೆ, ರಾ.ಹೆ ಯೋಜನೆ ತಂದವರು ಆಸ್ಕರ್ ಫರ್ನಾಂಡಿಸ್ ಅವರು ಇದರ ಜೊತೆಗೆ ಆಗುಂಬೆಯಲ್ಲಿ ರಿಸರ್ವ್ ಫಾರೆಸ್ಟ್ ಸಮಸ್ಯೆ ಇದ್ದಂತಹ ಸಮಯದಲ್ಲಿ ಅದಕ್ಕಾಗಿ ಪ್ರತ್ಯೇಕ ಸಭೆ ಮಾಡಿ, ಮಲ್ಪೆಯಿಂದ ಆಗುಂಬೆವರೆಗೆ ರಾ.ಹೆ ಮಾಡುವ ಪ್ರಯತ್ನ ಮಾಡಿದ್ದವರು.

ಶಿರಾಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಬೇಕು ಎಂಬ ನಿಟ್ಟಿನಲ್ಲಿ ಅದಕ್ಕೆ ಅನುದಾನ ಬಿಡುಗಡೆ ಮಾಡಿದರು ಇವರು ಹಾಗೂ ಕೊಂಕಣ ರೈಲ್ವೆ ಸರ್ವೆ ಪ್ರಾರಂಭವಾಗಿದ್ದು ಆಸ್ಕರ್ ಫರ್ನಾಂಡಿಸ್ ಅವರ ಮನವಿಯ ಮೇರೆಗೆ ಎನ್ನುವುದು ಗಮನಾರ್ಹ ವಾದರೂ ಈ ಬಗ್ಗೆ ಎಲ್ಲೂ ಪ್ರಚಾರ ಪಡೆದವರಲ್ಲ. ಇದರೊಂದಿಗೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಎಂಆರ್ಪಿಎಲ್. ನಂತಹ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದು ಆಸ್ಕರ್ ಫರ್ನಾಂಡಿಸ್ ಅವರು ಕರಾವಳಿ ಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇವರು ಎಲ್ಲರನ್ನೂ ಸಮಾನವಾಗಿ ನೋಡಿದವರು ಹಾಗೂ ಜನರ ಕಷ್ಟಕ್ಕೆ ಸ್ಪಂದಿಸಿದವರು. ನೆಹರು ಕುಟುಂಬ ಅತ್ಯಂತ ವಿಶ್ವಾಸದಿಂದ ಕಾಣುವಂತ ವ್ಯಕ್ತಿ ಎಂದು ಅವರ ಅಭಿವೃದ್ಧಿ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿ ನುಡಿನಮನ ಸಲ್ಲಿಸಿದ್ದಾರೆ.

ಈ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಅವರು ತಾನು ಅದೆಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ತಾನು ಮಾಡಿದ ಕೆಲಸಕ್ಕೆ ಒಮ್ಮೆಯೂ ಪ್ರಚಾರ ಮಾಡಿದವರಲ್ಲ. ಮೈಸೂರಿನಿಂದ ಬೆಂಗಳೂರಿಗೆ ದಶಪತ ರಸ್ತೆ ಯೋಜನೆ ಜಾರಿ ಮಾಡಿದವರು ಆಸ್ಕರ್ ಫರ್ನಾಂಡಿಸ್. ಯಾರೊಂದಿಗೂ ಜಗಳ ಮಾಡಿದವರಲ್ಲ. ಅವರು ತೋರಿಸಿದ ದಾರಿ ಕೇವಲ ಕಾಂಗ್ರೆಸಿಗರಿಗಲ್ಲ, ಅದು ಎಲ್ಲರಿಗೂ ಮಾದರಿಯಾಗಿದೆ. 

ಆಸ್ಕರ್ ಫರ್ನಾಂಡಿಸ್ ಅವರಿಗೆ ಬಿಜೆಪಿ ಕಚೇರಿಯಲ್ಲೂ ಶ್ರದ್ಧಾಂಜಲಿ ಸಭೆ ನಡೆಸಿದ್ದು ಒಳ್ಳೆಯತನಕ್ಕೆ ಎಲ್ಲಾ ಕಡೆಯೂ ಮನ್ನಣೆ ಸಿಗುತ್ತದೆ ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಅಗಲಿದ ನಾಯಕನ ನೆನೆದು ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಅವರು ಪ್ರಾಸ್ತಾವಿಕ‌ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊ| ಮುರಲೀಧರ ಉಪಾಧ್ಯಾಯ, ಕುದಿ ವಸಂತ ಶೆಟ್ಟಿ, ಡಾ| ಶ್ರೀಕಾಂತ ಸಿದ್ಧಾಪುರ, ರೆ|ಫಾ| ವಿಲಿಯಂ ಮಾರ್ಟಿಸ್, ಶ್ಯಾಮಲಾ ಭಂಡಾರಿ, ವೆರೋನಿಕಾ ಕರ್ನೇಲಿಯೋ, ಕೆದೂರು ಸದಾನಂದ ಶೆಟ್ಟಿ, ದೇವರಾಜ ಶೆಟ್ಟಿ, ನವೀನ್‌ಚಂದ್ರ ಜೆ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ,ದೀಪಕ್ ಕೋಟ್ಯಾನ್, ರಾಜು ಪೂಜಾರಿ, ಭುಜಂಗ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಬಿ. ನರಸಿಂಹ ಮೂರ್ತಿ, ಪ್ರಖ್ಯಾತ್ ಶೆಟ್ಟಿ, ಬಿ. ಕುಶಲ್  ಶೆಟ್ಟಿ, ಜನಾರ್ದನ ತೋನ್ಸೆ, ಬಿ. ಹಿರಿಯಣ್ಣ, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ದಿನೇಶ್ ಪುತ್ರನ್, ಉದ್ಯಾವರ ನಾಗೇಶ್ ಕುಮಾರ್, ಹಬೀಬ್ ಆಲಿ, ಯತೀಶ್ ಕರ್ಕೆರ, ಕಿಶನ್ ಹೆಗ್ಡೆ ಕೊಳ್ಕೆಬೈಲ್,

ಹರೀಶ್ ಕಿಣಿಬಿಪಿನ್‌ಚಂದ್ರ ಪಾಲ್ ನಕ್ರೆ, ಹರೀಶ್ ಶೆಟ್ಟಿ ಪಾಂಗಾಳ, ಸತೀಶ್ ಅಮೀನ್ ಪಡುಕೆರೆ, ದಿನಕರ ಹೇರೂರು, ಶಂಕರ್ ಕುಂದರ್, ಪ್ರದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಪೂಜಾರಿ, ಮದನ್ ಕುಮಾರ್, ಪ್ರವೀಣ್ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಶಬ್ಬೀರ್ ಅಹ್ಮದ್, ರಮೇಶ್ ಕಾಂಚನ್, ಲೂಯೀಸ್ ಲೋಬೊಡಾ| ಸುನೀತಾ ಶೆಟ್ಟಿರೋಶನಿ ಒಲಿವರ್, ಕೇಶವ ಕೋಟ್ಯಾನ್, ರೋಶನ್ ಶೆಟ್ಟಿ, ವೈ. ಸುಕುಮಾರ್, ಅಮೃತ್ ಶೆಣೈ, ಮಹಾಬಲ ಕುಂದರ್, ಸದಾಶಿವ ದೇವಾಡಿಗ, ಇಸ್ಮಾಯಿಲ್ ಆತ್ರಾಡಿ, ದಿವಾಕರ ಕುಂದರ್, ಸದಾಶಿವ ಕಟ್ಟೆಗುಡ್ಡೆ, ಬಾಲಕೃಷ್ಣ ಪೂಜಾರಿ, ಗಣೇಶ್ ನೆರ್ಗಿ, ನಾರಾಯಣ ಕುಂದರ್, ಸತೀಶ್ ಕಿಣಿ ಬೆಳ್ವೆ ˌಲೂಯಿಸ್ ಲೊಬೋ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಣೆ ಭಾಸ್ಕರ್ ರಾವ್ ಕಿದಿಯೂರು ಹಾಗೂ ಅಣ್ಣಯ್ಯ ಸೇರಿಗಾರ್, ಧನ್ಯವಾದ ಹೆಚ್. ಹರಿಪ್ರಸಾದ್ ಶೆಟ್ಟಿ.

Leave a Reply

Your email address will not be published. Required fields are marked *

error: Content is protected !!