ಸೈಕಲಾಜಿಕಲ್ ಥ್ರಿಲ್ಲರ್ ಕಿರುಚಿತ್ರ ‘ಸ್ಪ್ಲಿಟ್’ ಬಿಡುಗಡೆ
ಉಡುಪಿ ಸೆ.18 (ಉಡುಪಿ ಟೈಮ್ಸ್ ವರದಿ): “ಸ್ಪ್ಲಿಟ್ (SPLIT)” ಎಂಬ ಕಿರುಚಿತ್ರವೊಂದು ಇಂದು ಬಿಡುಗಡೆಗೊಂಡಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಿರುಚಿತ್ರವಾಗಿದ್ದು, ಇದರ “ಇನ್ನೋವೇಟಿವ್ ಟ್ರೇಲರ್” ಕನ್ನಡಕ್ಕೆ ವಿನೂತನವಾಗಿದೆ.
ಸ್ಪ್ಲಿಟ್ ಕಿರುಚಿತ್ರ “ಆನಂದ್ ಆಡಿಯೋ” ಯೂಟ್ಯೂಬ್ ಚಾನಲ್ ನಲ್ಲಿಈ ತಂಡಕ್ಕೆ ಸ್ಪೂರ್ತಿಯಾದ ನಿರ್ದೇಶಕ-ನಟ ಉಪೇಂದ್ರ ಅವರ ಜನುಮ ದಿನದOದು ಬಿಡುಗಡೆಗೊಂಡಿದೆ. ಸರ್ರೆಯಲ್ ಸಿನಿಮಾಸ್” ಎಂಬ ಉತ್ಸಾಹಿ ತಂಡ ಈ ಕಿರುಚಿತ್ರವನ್ನು ತಯಾರಿಸಿದೆ. ವಾಸ್ತವದ ಬದುಕಿನಲ್ಲಿ ಪ್ರತಿ ಹಂತದಲ್ಲೂ ಅನೇಕ ಆಯ್ಕೆಗಳನ್ನು ಮಾಡುವ ಅವಕಾಶವಿರುತ್ತದೆ. ಪ್ರತಿಯೊಂದು ಆಯ್ಕೆಯಲ್ಲೂ ನಾವು ಅತ್ಯುತ್ತಮವಾದುದನ್ನೇ
ಬಯಸುತ್ತೇವೆ. ಆದರೆ, ಅದರಲ್ಲಿ ಎಲ್ಲಾ ಹಂತದಲ್ಲಿಯೂ ನಾವು ಸಫಲ ರಾಗುತ್ತೇವೆಯೇ? ಒಂದು ವೇಳೆ ಹಲವು ವರ್ಷಗಳ ಬಳಿಕ ತಿರುಗಿ ನೋಡಿದಾಗ ನಮ್ಮ ಬದುಕನ್ನೇ ಬದಲಾಯಿಸಿದ ಒಂದು ಆಯ್ಕೆಯ ಕುರಿತು ನಮಗೇ ಗೊಂದಲವಾದರೆ ಹೇಗೆ ಸ್ವೀಕರಿಸುತ್ತೇವೆ? ಎನ್ನುವ ಕಥಾಹಂದರವನ್ನುಈ ಕಿರುಚಿತ್ರ ಹೊಂದಿದೆ.
ಈ ಕಿರುಚಿತ್ರದಲ್ಲಿ ನನ್ನರಸಿ ರಾಧೆ” ಧಾರಾವಾಹಿ ಖ್ಯಾತಿಯ ರಂಗ ಕಲಾವಿದ ಶಿಶಿರ್ ಕುಮಾರ್ ಅವರು ನಟಿಸಿದ್ದು, ಕಿರುಚಿತ್ರ ದಲ್ಲಿ ಬರುವ ನಾಲ್ಕು ಪಾತ್ರಗಳನ್ನೂ ಶಿಶಿರ್ ಕುಮಾರ್ ಒಬ್ಬರೇ ನಿರ್ವಹಿಸಿರುವುದು ವಿಶೇಷ.
ಮಲಯಾಳಂನ “ಕೇರಳ ಪೆರಾಡಿಸೋ” ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವಿರುವ ಹಾಗೂ “ಕಠೋಪನಿಷದ್” ಎಂಬ ಕಿರುಚಿತ್ರವನ್ನು ನಿರ್ದೇಶಿಸಿರುವ ಮುರಳಿ ಕೃಷ್ಣ ಅವರು ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಹಾಗೂ ಕನ್ನಡ, ತಮಿಳು, ತುಳು, ಕೊಂಕಣಿ ಚಲನಚಿತ್ರ ಮತ್ತು ಕಿರುಚಿತ್ರಗಳಿಗೆ ಸಂಗೀತ ನೀಡಿರುವ ಕ್ಲಾರೆನ್ಸ್ ಅಲೆನ್ ಕ್ರಾಸ್ತಾ ಅವರು ಈ ಕಿರುಚಿತ್ರ ಕ್ಕೆ ಸಂಗೀತ ನೀಡಿದ್ದಾರೆ.ಈ ಹಿಂದೆ ಕಠೋಪನಿಷದ್, ಬ್ಲಾಂಕ್ ಕಿರುಚಿತ್ರಗಳ ಅನುಭವ ಹೊಂದಿರುವ ಚಂದ್ರಕಾಂತ್ ಅವರು ಒಬ್ಬರೇ ಸಂಕಲನ, ಪೋಸ್ಟರ್-ಡಿಸೈನ್ ಹಾಗೂ ವಿಎಫ್ಎಕ್ಸ್ ನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಓಪ್ಟಿಮೆಲೊ (Optimelo) ಕಿರುಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿರುವ ಅನುಭವ ಇರುವ ಅರುಣ್ ಕುಮಾರ್ ಅವರು ಛಾಯಾಗ್ರಹಣವನ್ನು ಮಾಡಿದ್ದಾರೆ.