ಉಡುಪಿ: ಶೀಘ್ರದಲ್ಲಿ ಬಸ್ಸು ದರ ಪರಿಷ್ಕರಣೆ

ಉಡುಪಿ, ಸೆ.18: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಶೇಖರ ಕುಲಾಲ್, ಬೈರಂಪಳ್ಳಿ ಗ್ರಾಮ ಇವರು ಕುಂಟಾಲಕಟ್ಟೆ ಜನರ ಪರವಾಗಿ, ಕುಂಟಾಲಕಟ್ಟೆ ಮಾರ್ಗವಾಗಿ ಎಳ್ಳಾರೆಗೆ ಬೆಳಿಗ್ಗೆ ಮತ್ತು ಸಾಯಂಕಾಲ ಬಸ್ಸು ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.

ಕೋವಿಡ್‌ನಿಂದಾಗಿ ಕಳೆದ ಒಂದು ವರ್ಷದಿಂದ ಈ ಕಛೇರಿಯಲ್ಲಿ 573 ಬಸ್ಸುಗಳು ಅದ್ಯರ್ಪಣದಲ್ಲಿರುತ್ತದೆ. ಅದರಲ್ಲಿ ಕೆಲವು
ಬಸ್ಸುಗಳನ್ನು ಮಾತ್ರ ಅದ್ಯರ್ಪಣದದಿಂದ ಬಿಡಿಸಿಕೊಳ್ಳುತ್ತಿದ್ದಾರೆ. ಅದ್ಯರ್ಪಣದಿಂದ ಬಿಡುಗಡೆಗೊಳಿಸದೆ ವಾಹನವನ್ನು
ಓಡಿಸಿದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ತೆರಿಗೆಯ ಜೊತೆಗೆ ದಂಡ ತೆರಬೇಕಾಗುತ್ತದೆ. ಈಗಾಗಲೇ
ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇತ್ತೀಚೆಗೆ ಕೋವಿಡ್‌ನ ವಾರದ ಕೊನೆಯ ಕರ್ಫ್ಯೂ ತೆರವುಗೊಳಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ಅದ್ಯರ್ಪಣದದಿಂದ ತೆರವುಗೊಳಿಸಲು ಬಸ್ಸು ಮಾಲಕರ ಮನವೊಲಿಸಲಾಗುವುದೆಂದರು.

ಈ ಬಗ್ಗೆ ಕೆಎಸ್‌ಆರ್‌ಟಿಯವರಿಗೂ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯು ತಾನಾಗಿಯೇ
ಬಗೆಹರಿಯುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು. ಸಾರ್ವಜನಿಕರು ತಮ್ಮ ವಾಹನದ ವಿಮೆಯ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ವಾಹನವು ಅಪಘಾತವಾದಾಗ ವಿಮಾ ಕಂಪೆನಿಯವರು ಟೋಟಲ್ ಲಾಸ್ ಎಂದು ವಿಮೆ ಪರಿಹಾರವನ್ನು ನೀಡಿ ಪುನ: ಬೇರೆಯವರಿಗೆ ವಾಹನ ಮಾರಾಟ ಮಾಡುತ್ತಾರೆ. ಈ ಬಗ್ಗೆ ಜಾಗರೂಕರಾಗಬೇಕು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು.

ಈ ಬಗ್ಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಎಲ್.ಎನ್.ಮುರಳೀಧರ ಮಾತನಾಡಿ, ಈಗ ಹಲವಾರು ವಿಮಾ ಕಂಪೆನಿಗಳು ಅಸ್ತಿತ್ವದಲ್ಲಿದ್ದು, ಸರ್ಕಾರದ ಅಧೀನದಲ್ಲಿರುವ 4 ವಿಮಾ ಕಂಪೆನಿಗಳಿದ್ದು ಇತರೆ ಖಾಸಗಿ 30 ವಾಹನ ವಿಮಾ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ವಿಮಾ ಕಂಪೆನಿಗಳು ಸರ್ಕಾರದ ಕಾಯಿದೆಯನ್ವಯ ಕೆಲಸ ನಿರ್ವಹಿಸುತ್ತಿವೆ. ಖಾಸಗಿ ವಿಮಾ ಕಂಪೆನಿಗಳು ಪೈಪೋಟಿ ನಡೆಸುತ್ತಿದ್ದು ಕಾಯಿದೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ. ವಾಹನ ಅಪಘಾತವಾದಲ್ಲಿ ವಾಹನದ ಮುಖಬೆಲೆಯ ವಿಮಾ ಮೊತ್ತದ 75%ಕ್ಕಿಂತ ಜಾಸ್ತಿ ದುರಸ್ಥಿಗೆ ಖರ್ಚಾದರೆ ಸಾಲ್‌ವೇಜ್ ಲಾಸ್/ಟೋಟಲ್ ಲಾಸ್ ಆಧಾರದಲ್ಲಿ ವಿಮಾ ಮೊತ್ತವನ್ನು ವಿಲೇ ಮಾಡಲಾಗುತ್ತದೆ.

ಇಲ್ಲಿ ನೋಂದಣಿ ಪ್ರಮಾಣ ಪತ್ರದೊಂದಿಗೆ ಅಥವಾ ನೋಂದಣಿ ಪ್ರಮಾಣಪತ್ರವಿಲ್ಲದೆ ವಿಮಾ ಪರಿಹಾರ ನೀಡಲಾಗುತ್ತದೆ. ನೋಂದಣಿ ಪ್ರಮಾಣಪತ್ರವಿಲ್ಲದೆ ವಿಮಾ ಮೊತ್ತದ ಪರಿಹಾರ ಬೇಗ ಸಿಗುತ್ತದೆ. ವಾಹನವನ್ನು ಪುನ: ರಿಪೇರಿ ಮಾಡಿ ಅವರು
ಮಾರಾಟ ಮಾಡುತ್ತಾರೆ. ನೋಂದಣಿ ಪ್ರಮಾಣಪತ್ರದೊಂದಿಗೆ ವಿಮಾ ಮತ್ತದ ಪರಿಹಾರ ನೀಡುವಾಗ ವಾಹನವನ್ನು ಒಟ್ಟು
ನಷ್ಟವೆಂದು (ಟೋಟಲ್ ಲಾಸ್) ಪರಿಗಣಿಸಿ ವಾಹನವನ್ನು ಗುಜರಿಗೆ ಹಾಕಿ ಉಳಿದ ಮೊತ್ತವನ್ನು ವಿಮಾ ಕಂಪೆನಿಯು ಭರಿಸುತ್ತದೆ
ಮತ್ತು ತದನಂತರ ನೊಂದಣಿಯನ್ನು ರದ್ದುಪಡಿಸಲು ಪ್ರಾದೇಶಿಕ ಸಾರಿಗೆ ಕಛೇರಿಗೆ ಒಪ್ಪಿಸಲೇ ಬೇಕಾಗುತ್ತದೆ ಎಂದರು. ಕಡ್ಡಾಯ ವಾಗಿ ನೋಂದಣಿ ಪ್ರಮಾಣಪತ್ರದೊಂದಿಗೆ ವಿಮಾ ಪರಿಹಾರ ಮೊತ್ತವನ್ನುಟೋಟಲ್ ಲಾಸ್ ಎಂದು ಪರಿಗಣಿಸುವ ಸಮಯದಲ್ಲಿ, ನೋಂದಣಿ ಪತ್ರವನ್ನು ಪ್ರಾದೇಶಿಕ ಸಾರಿಗೆ ಕಛೇರಿಗೆ ರದ್ದು ಪಡಿಸಲು ಸಲ್ಲಿಸಲೇಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು.

ನೇಮಿರಾಜ್ ಅರಿಗ, ಪ್ರಾಂಶುಪಾಲರು, ಮಹಾವೀರ ಮೋಟಾರು ಚಾಲನಾ ತರಬೇತಿ ಶಾಲೆಯವರು ಮಾತನಾಡಿ , ವಾಹನ
ವಿಮೆಯನ್ನು ಪಾವತಿಸಿದ್ದರೂ ವಾಹನ ತಂತ್ರಾ0ಶದಲ್ಲಿ ಅಪ್‌ಲೋಡ್ ಆಗಲು ತಡವಾಗುತ್ತದೆ. ವಾಹನ ಮಾಲಿಕತ್ವದ ಕಾರ್ಡ್
ಸಿಗುವಾಗ ತಡವಾಗುವುದರಿಂದ ಆ ನಡುವಿನ ಸಮಯದಲ್ಲಿ ವಾಹನ ಅಪಘಾತಕ್ಕೀಡಾದರೆ ವಾಹನದ ವಿಮಾ ಪರಿಹಾರ ಮೊತ್ತ
ಪಡೆಯಲು ಸಮಸ್ಯೆಯಾಗುತ್ತದೆ ಎಂದರು.

ವಾಹನದ ಮಾಲೀಕತ್ವ ವರ್ಗಾವಣೆಯಾದ ನಂತರ ಬಿ ವಹಿಯ ಪ್ರತಿಯನ್ನು ಸಲ್ಲಿಸಲು ತಿಳಿಸಿದರು. ವಿಮಾ ಮೊತ್ತವನ್ನು ಪಾವತಿಸಿ 2 ದಿನದೊಳಗೆ (48 ಗಂಟೆಯೊಳಗೆ) ವಾಹನ ತಂತ್ರಾAಶದಲ್ಲಿ ಅಪ್‌ಲೋಡ್ ಆಗುತ್ತದೆ. ಶೀಘ್ರದಲ್ಲಿ ಅಪ್‌ಲೋಡ್ ಅಪ್‌ಟೇಟ್ ಆಗುವ ಬಗ್ಗೆ ಐಆರ್‌ಎಐಡಿ, ಹೈದರಾಬಾದ್‌ಗೆ ಮನವಿ ಸಲ್ಲಿಸಬಹುದೆಂದರು. ಈಗ ವಿಮಾ ಪತ್ರದಲ್ಲಿ ಬಾರ್‌ಕೋಡ್
ಇರುವುದರಿಂದ ಅದನ್ನೂ ಪರಿಶೀಲಿಸಬಹುದೆಂದು ವಿಮಾ ಕಂಪೆನಿಯವರು ತಿಳಿಸಿದರು. ವಿಮಾ ಮೊತ್ತವನ್ನು ಚೆಕ್ ರೂಪದಲ್ಲಿ ಪಾವತಿಸಿದಾಗ 7 ದಿನದೊಳಗೆ ನಗದೀಕರಿಸಿಕೊಂಡು ವಿಮಾ ಪತ್ರವನ್ನು ನೀಡಬೇಕು ಅಥವಾ ಮೊದಲ ಹಂತದಲ್ಲಿ ಕವರ್ನೋಟ್ ಮಾತ್ರ ನೀಡಬಹುದೆಂದು ಸಲಹೆ ನೀಡಿದರು. ಒಂದೆರಡು ತಿಂಗಳ ನಂತರ ವಿಮಾ ಕಂಪೆನಿಯಿOದ ವಿಮೆಯನ್ನು ರದ್ದುಪಡಿಸ ಲಾಗಿದೆ ಎಂದು ಪತ್ರವು ಈ ಕಛೇರಿಗೆ ಬರುತ್ತದೆಯೆಂದು ತಿಳಿಸಿದರು.

ಕೆಲವರು ಭೋಗಸ್ ವಿಮಾ ಪಾಲಿಸಿ ಮಾಡುತ್ತಾರೆಂದೂ ವಾಹನದ ಚಾಲಕರು/ಮಾಲಕರು ವಾಹನದ ವಿಮೆಯ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಬೇಕೆOದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು. ನಾಗರಾಜ ಕಲೇಕಾರ್, ಗಂಗೊಳ್ಳಿ ರವರು ಮಾತನಾಡಿ ಕುಂದಾಪುರದಿOದ ಗಂಗೊಳ್ಳಿಗೆ ರಾತ್ರಿ 9.30ಗೆ ಬರುತ್ತಿದ್ದ ಎಪಿಎಂ ಬಸ್ಸು ಈಗ ಬರುತ್ತಿಲ್ಲ. ರಜಾ ದಿನಗಳಲ್ಲೂ ಬಸ್ಸು ಸೌಲಭ್ಯವಿರು ವುದಿಲ್ಲ. ಕೆಲವು ಬಸ್ಸುಗಳು ಪರವಾನಿಗೆ ಇಲ್ಲದೆ ಓಡಾಡುತ್ತವೆ.

ಬಸ್ಸಿನ ದರ ಹೆಚ್ಚು ತೆಗೆದುಕೊಳ್ಳುತ್ತಾರೆಂದು ದೂರು: ಕೋವಿಡ್‌ನಿಂದಾಗಿ ಬಸ್ಸುಗಳು ಅನುಪಯುಕ್ತತೆಯಲ್ಲಿರುವುದರಿಂದ ಈ ಸಮಸ್ಯೆಯುಂಟಾಗಿದೆ. ಈಗ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿರುವುದರಿOದ ಮತ್ತು ವಾರಾಂತ್ಯ ಕರ್ಫ್ಯೂ ರದ್ದಾಗಿರುವುದ ರಿಂದ ಹಲವು ಬಸ್ಸುಗಳು ಅದ್ಯರ್ಪಣದಿಂದ ಬಿಡುಗಡೆಗೊಳ್ಳುತ್ತಿದ್ದು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವು ದೆಂದರು. ಆದಷ್ಟು ಶೀಘ್ರದಲ್ಲಿ ಬಸ್ಸು ದರ ಪರಿಷ್ಕರಣೆಯನ್ನೂ ಮಾಡಿ ಪತ್ರಿಕಾ ಪ್ರಕಟಣೆಯನ್ನು ನೀಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!