ಅಂಬಲಪಾಡಿ: ರಸ್ತೆಗೆ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ರೂ.5000 ದಂಡ

ಉಡುಪಿ ಸೆ.18(ಉಡುಪಿ ಟೈಮ್ಸ್ ವರದಿ): ಜಿಲ್ಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಜಿಲ್ಲಾಡಳಿತ ಅದೆಷ್ಟು ಕಾರ್ಯಕ್ರಮಗಳನ್ನು ರೂಪಿಸಿದರೂ ನಗರದ ಹಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದೀಗ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದು ಹೋದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ.

ಉಡುಪಿಯ ಅಂಬಲಪಾಡಿ ವಾರ್ಡ್ ನ ಸಂದೀಪ್ ನಗರದ ಬಳಿಯ ರಸ್ತೆಯಲ್ಲಿ ತ್ಯಾಜ್ಯ ಹಾಕಿದವರನ್ನು ಪತ್ತೆ ಹಚ್ಚಲಾಗಿದ್ದು, 5000 ರೂ. ದಂಡ ವಸೂಲಿ ಮಾಡಲಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯ ವಿಲೇವಾರಿಗೆ ನಗರ ಸಭೆ, ಸ್ಥಳೀಯ ಆಡಳಿತ ಹೆಚ್ಚಿನ ಒತ್ತು ನೀಡಿ ಕಾರ್ಯಪ್ರವೃತ್ತರಾಗಿದೆ. ಆದರೂ ಎಲ್ಲೆಂದರಲ್ಲಿ ಕಸ ಎಸೆಯುವ ದುರಾಭ್ಯಾಸ ಮಾತ್ರ ಇನ್ನೂ ಮುಂದುವರೆದಿದೆ.  ಈಗಾಗಲೇ ಈ ರೀತಿ ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದು ಹೋಗುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದರೂ, ಸ್ವಚ್ಚತೆ ಬಗ್ಗೆ  ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಮತ್ತೆ ಇಂತಹ ಘಟನೆಗಳು ಮುಂದುವರೆಯುತ್ತಿರುವುದು ಬೇಸರದ ಸಂಗತಿ.

Leave a Reply

Your email address will not be published. Required fields are marked *

error: Content is protected !!