ಮಂಗಳೂರು: ‘ಹ್ಯಾಂಗ್ಯೋ ಡಿಎನ್ಎ ಫ್ರೋಜನ್ ಸ್ವೀಟ್ ಕಾರ್ನ್ ಬಿಡುಗಡೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಇಂದು ಮಂಗಳೂರಿನ ಐಸ್ ಕ್ರೀಮ್ ತಯಾರಕ ಸಂಸ್ಥೆಯಾದ ಹ್ಯಾಂಗ್ಯೋ ಐಸ್ ಕ್ರೀಮ್ಸ್ ಹೊರತಂದ ‘ಹ್ಯಾಂಗ್ಯೋ ಡಿಎನ್ಎ ಫ್ರೋಜನ್ ಸ್ವೀಟ್ ಕಾರ್ನ್ (Hangyo DNA Frozen Sweet Corn) ಇದನ್ನು ಬಿಜೆಪಿ ರಾಜಾಧ್ಯಕ್ಷ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು .
ಈ ಸಂದರ್ಭದಲ್ಲಿ ಹ್ಯಾಂಗ್ಯೋ ಐಸ್ ಕ್ರೀಮ್ಸ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್ ಜಿ. ಪೈ, ವ್ಯವಸ್ಥಾಪಕರಾದ ರಾಕೇಶ್ ಕಾಮತ್, ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಮ್ ದಾಸ್, ಜಗದೀಶ್ ಅಧಿಕಾರಿ ಉಪಸ್ಥಿತರಿದ್ದರು.