ಬೈಂದೂರು: ದೋಣಿ ಮುಗುಚಿ ಇಬ್ಬರು ಮೀನುಗಾರರ ನಾಪತ್ತೆ

ಬೈಂದೂರು: ಉಪ್ಪುಂದದ ಸಮುದ್ರ ತೀರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಇಬ್ಬರು ನಾಪತ್ತೆಯಾದ ಘಟನೆ ಇಂದು ಸಂಜೆ ನಡೆದಿದೆ.

7 ಮಂದಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ತಾರಾಪತಿ ಸಮೀಪಿಸುತ್ತಿದ್ದಂತೆ ಸಮುದ್ರ ಅಲೆಯ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿದೆ ಎನ್ನಲಾಗಿದೆ. ದೋಣಿಯಲ್ಲಿದ್ದ ಚರಣ್ ಖಾರ್ವಿ (27 ) ಹಾಗೂ ಅಣ್ಣಪ್ಪ ಮೊಗವೀರ (45 ) ನಾಪತ್ತೆಯಾಗಿದ್ದಾರೆ ಉಳಿದವರು ಈಜಾಡಿಕೊಂಡು ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು, ಕರಾವಳಿ ಕಾವಲು ಪಡೆಯ ಪೊಲೀಸರು ನಾಪತ್ತೆಯಾದ ಮೀನುಗಾರರ ಹುಡುಕಾಟ ಕಾರ್ಯ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!