ಪರಿಸರ ಪೂರಕ ಕಟ್ಟಡಗಳಿಗೆ ಹೆಚ್ಚಿನ ಆದ್ಯತೆ ನೀಡಿ- ಜಿ.ಪಂ. ಸಿಇಒ ಡಾ.ನವೀನ್ ಭಟ್

ಉಡುಪಿ, ಸೆ.16: ಕರಾವಳಿ ಭಾಗದಲ್ಲಿ ಮಳೆ, ನೆರೆ ಬಂದರೂ ಬೀಳದಂತಹ ಕಟ್ಟಡಗಳು ನಿರ್ಮಾಣವಾಗಬೇಕು. ಪರಿಸರ ಪೂರಕ ಕಟ್ಟಡಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿ.ಪಂ. ಸಿಇಒ ಡಾ. ನವೀನ್ ಭಟ್ ಹೇಳಿದರು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ & ಆರ್ಕಿಟೆಕ್ಟ್ (ಎಸಿಸಿಇಎ) ಉಡುಪಿ ವತಿಯಿಂದ ಮಣಿಪಾಲ್ ಇನ್ ಹೊಟೇಲ್‌ನ ಝಿಹಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಎಂಜಿನಿಯರ್ಸ್ ಡೇ ಉದ್ಘಾಟಿಸಿ ಅವರು ಮಾತನಾಡಿದರು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ 30 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿನ್ಯಾಸ, ತಂತ್ರಜ್ಞಾನ ಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2.5 ವರ್ಷದಿಂದ 5 ಗಳ ನಡುವೆ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಬದಲಾವಣೆ ಸಂಭವಿಸುತ್ತಿದೆ ಎಂದರು.

ಎಂಜಿನಿಯರ್ ಗಳು ಕಾರ್ಮಿಕರ ಭದ್ರತೆಗೂ ಹೆಚ್ಚಿನ ಗಮನ ವಹಿಸಬೇಕು ಎಂದರು. ಸಮ್ಮಾನ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ವಾಸುದೇವ ರಾವ್, ಸ್ಕೂಬ್ ಇನ್‌ಫ್ರಾ ಸೊಲ್ಯುಶನ್ಸ್‌ನ ರಾಮಚಂದ್ರ, ಆರ್‌ಸಿಸಿ ಕಂಟ್ರಾಕ್ಟರ್‌ ಗುಂಡ್ಮಿ ಪರಮೇಶ್ವರ ಆಚಾರ್ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ ಎಂಜಿನಿಯರ್ ಶ್ರೀನಾಥ್ ಶೆಟ್ಟಿ ಮಾತನಾಡಿದರು. ಎಂಜಿನಿಯರ್ ಮಹೇಶ್ ಕಾಮತ್ ಅತಿಥಿ ಗಳನ್ನು ಪರಿಚಯಿಸಿದರು.ಮುಖ್ಯ ಅತಿಥಿಗಳಾಗಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌&ಆರ್ಕಿಟೆಕ್ಟ್ ನ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ಉಪಾಧ್ಯಕ್ಷ ಭಗವಾನ್ ದಾಸ್, ಕಾರ್ಯದರ್ಶಿ ಅಮಿತ್ ಅರವಿಂದ್, ಎಂಜಿನಿಯರ್ ಲಕ್ಷ್ಮೀ ನಾರಾಯಣ ಭಟ್ ಉಪಸ್ಥಿತರಿದ್ದರು. ಅಧ್ಯಕ್ಷ ಎಂ.ಗೋಪಾಲ್ ಭಟ್ ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ಮತ್ತು ಯೋಗಿಶ್ಚಂದ್ರಾದರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!