ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಹಕರಿಸದಿದ್ದಲ್ಲಿ ಪರವಾನಿಗೆ ರದ್ದು
ಉಡುಪಿ, ಜುಲೈ 8: ಜಿಲ್ಲೆಯಲ್ಲಿ ಆದೇಶದಂತೆ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಉದ್ದಿಮೆಗಳನ್ನು ತರೆಯಲು ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 8 ರಿಂದ ಬೆಳ್ಳಿಗೆ 5 ರವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಭಂದಿಸಿದ್ದು, ಕರ್ಪ್ಯೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಜುಲೈ 5ರ ಭಾನುವಾರದಿಂದ ಮುಂದಿನ ಆಗಸ್ಟ್ 2ರ ವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣ ಲಾಕ್ ಡೌನ್ ಘೋಷಿಸಿದ್ದು ,ಯಾವುದೇ ನಾಗರಿಕರ ಓಡಾಟವನ್ನು ನಿರ್ಬಂಧಿಸಲಾಗುತ್ತದೆ. ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು, ಅಂಗಡಿ ಮಳಿಗೆಗಳು,ಬಾರ್ ಮತ್ತು ರೆಸ್ಟೊಂರೆಟ್ ಗಳು ,ಹೋಟೆಲ್ ಗಳು,ಬ್ಯಾಂಕ್ ಗಳು, ಮತ್ತು ಮಾರುಕಟ್ಟೆಗಳಲ್ಲಿ ಮಾಲಕರು ,ಸಿಬ್ಬಂದಿಗಳು ಮತ್ತು ಗ್ರಾಹಕರು ಕೋವಿಡ್ 19 ಸಂಕ್ರಾಮಿಕ ರೋಗವನ್ನು ಸಮುದಾಯಕ್ಕೆ ಹರಡದಂತೆ ಸಹಕರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು.
ಉಪಯೋಗಿಸಿದ ಮಾಸ್ಕ್ ಗಳನ್ನು ಮರು ಬಳಕೆ ಯಾಗದಂತೆ ಕತ್ತರಿಸಿ ಯಾವುದೇ ಕಾಗದದಲ್ಲಿ ಸುತ್ತಿ ಪ್ರತ್ಯೇಕವಾಗಿ ನಗರಸಭೆಯ ಮನೆ ಮನೆ ಕಸ ಸಂಗ್ರಹಣೆಯ ವಾಹನಗಳಿಗೆ ನೀಡುವುದು.ಈ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ
ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಐ.ಪಿ.ಸಿ ಸೆಕ್ಷನ್ 188 ಮತ್ತು ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಿ ಕ್ರಮ
ಕೈಗೊಳ್ಳಲಾಗುವುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ತಿಳಿಸಿದ್ದಾರೆ.