ಯಕ್ಷಗಾನ ಕಲಾರಂಗ-ವಿದ್ಯಾಪೋಷಕ್ 574 ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ
ಉಡುಪಿ: ಯಕ್ಷಗಾನ ಕಲಾರಂಗದ ಆಯ್ದ 574 ವಿದ್ಯಾಪೋಷಕ ವಿದ್ಯಾರ್ಥಿಗಳಿಗೆ ‘ಗೀವ್ ಇಂಡಿಯಾ’ ಸಂಸ್ಥೆಯು ಕೊಡಮಾಡಿದ ತಲಾ ರೂ. 1000/- ಮೌಲ್ಯದ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ಸೆ. 11 ಹಾಗೂ 12, 2021 ರಂದು ಸಂಪನ್ನಗೊಂಡಿತು.
ಸೆ.11ರಂದು ಸಂಸ್ಥೆಯ ಕಛೇರಿಯಲ್ಲಿ ವಿದ್ಯಾಪೋಷಕ್ ದಾನಿಗಳಾದ ಎ.ಮುರಾರಿ ರಾವ್ ಹಾಗೂ ಚಂದ್ರಕಲಾ ರಾವ್ ದಂಪತಿಗಳು ಸಾಂಕೇತಿಕವಾಗಿ ಕಿಟ್ ವಿತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್, ಜತೆಕಾರ್ಯದರ್ಶಿಗಳಾದ ಪ್ರೊ. ನಾರಾಯಣ ಎಂ. ಹೆಗಡೆ, ಎಚ್.ಎನ್. ಶೃಂಗೇಶ್ವರ, ಸಕ್ರಿಯ ಕಾರ್ಯಕರ್ತರಾದ ಎ. ನಟರಾಜ ಉಪಾಧ್ಯ, ದಿನೇಶ್ ಪೂಜಾರಿ, ಅಶೋಕ್ ಎಂ, ಮಂಜುನಾಥ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.ಫಲಾನುಭವಿಗಳಿಗೆ ಅನುಕೂಲ ವಾಗುವಂತೆ ಸೆ.12 ರಂದು ಗಣೇಶ್ ರಾವ್ ಎಲ್ಲೂರು ಇವರ ನೇತೃತ್ವದಲ್ಲಿ ಕಟಪಾಡಿ, ಪಡುಬಿದ್ರೆ, ಬೆಳ್ಮಣ್, ಕಾರ್ಕಳ, ಹೆಬ್ರಿ, ಪೆರ್ಡೂರು ಮಾರ್ಗವಾಗಿ, ಮಂಜುನಾಥ ಇವರ ನೇತೃತ್ವದಲ್ಲಿ ಚೇರ್ಕಾಡಿ, ಕೊಕ್ಕರ್ಣೆ, ಹಾಲಾಡಿ, ಸೈಬ್ರಕಟ್ಟೆ, ಬಾರ್ಕೂರು ಮಾರ್ಗವಾಗಿ ಹಾಗೂ ಅಶೋಕ್ ಎಂ ಇವರ ನೇತೃತ್ವದಲ್ಲಿ ಬ್ರಹ್ಮಾವರ, ಸಾಲಿಗ್ರಾಮ, ಕೋಟೇಶ್ವರ, ಕುಂದಾಪುರ, ಹೆಮ್ಮಾಡಿ, ನಾವುಂದ, ಬೈಂದೂರು ಕೊಲ್ಲೂರು, ವಂಡ್ಸೆ ಮಾರ್ಗವಾಗಿ ಮೂರು ವಾಹನಗಳಲ್ಲಿ ಹೋಗಿ ಕಿಟ್ ವಿತರಿಸಲಾಯಿತು.