ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್: ಸ್ವಚ್ಚತಾ ಮಾಹಿತಿ ಕಾರ್ಯಕ್ರಮ
ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಸ್ವಚ್ಚತಾ ಮಾಹಿತಿ ಮತ್ತು ಹಸಿ ಕಸ ಸಂಗ್ರಹಕ್ಕೆ ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೋಸೆಫ್ ರೆಬೆಲ್ಲೋ ಅವರು ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟ ಹಸಿಕಸ ಮತ್ತು ಒಣ ಕಸ ವಿಂಗಡಣೆ ಮತ್ತು ವಿಲೇವಾರಿಯ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಡೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿಯವರು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ ಪಂಚಾಯಿತಿನ ವತಿಯಿಂದ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಡೆಕಾರು 9ನೇ ವಾರ್ಡ್ ಮನೆಗಳಿಗೆ 50 ಡಸ್ಟಬಿನ್ ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಡೆಕಾರು 9ನೇ ವಾರ್ಡ್ ಸದಸ್ಯರಾದ ಇಂದಿರಾ ಪಿ.ಶೆಟ್ಟಿ, ರಮೇಶ್, ಮಾಜಿ ಪಂಚಾಯತ್ ಅಧ್ಯಕ್ಷ ರಘನಾಥ್ ಕೋಟ್ಯಾನ್, ಸಮಾಜ ಸೇವಕರಾದ ನಿರುಪಮಾ ಪಿ ಶೆಟ್ಟಿ, ಕಡೆಕಾರು ಮೊಗವೀರ ಗ್ರಾಮ ಸಭೆಯ ಅಧ್ಯಕ್ಷ ಜಗನ್ನಾಥ್ ಕಡೆಕಾರ್, ಚೈತನ್ಯ ಫೌಂಡೇಶನ್ ನ ಸ್ವರೂಪ್, ಯತೀಶ್, ನೀಲಾವತಿ, ಡಾ. ಅನುಪಮ ಮೊದಲಾದವರು ಉಪಸ್ಥಿತರಿದ್ದರು. ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿದರು. ಜತಿನ್ ಕಡೆಕಾರ್ ವಂದಿಸಿದರು.
ಚೈತನ್ಯ ವೆಲ್ ಫರ್ ಫೌಂಡೇಶನ್ ಸಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯ ವಿಭಿನ್ನ ರೀತಿಯಲ್ಲಿ ನಡೆಸಿಕೂಂಡು ಬಂದಿರುವುದು ಮಾತ್ರವಲ್ಲದೆ ಸಮಾಜ ಸೇವಾ ಕಾರ್ಯಕರ್ತರನ್ನು ಗುರತಿಸಿ ಪ್ರೋತ್ಸಾಹಿಸುವ ಮೂಲಕ ತನ್ನನ್ನು ತಾನು ಗುರುತಿಸಲ್ಪಡುತ್ತದೆ. ಇನ್ನೂ ಹೆಚ್ಚಿನ ಕೆಲಸಕಾರ್ಯನಡೆಯಲಿ.