ಯುಎಇ: ಭಾರತ ಸೇರಿದಂತೆ ಹಲವು ದೇಶಗಳಿಗೆ ವಿದಿಸಿದ್ದ ಪ್ರಯಾಣ ನಿರ್ಬಂಧ ತೆರವು
ಅಬುಧಾಬಿ ಸೆ.11: ಭಾರತ ಸೇರಿದಂತೆ ಹಲವು ದೇಶಗಳಿಗೆ ವಿದಿಸಿದ್ದ ಪ್ರಯಾಣ ನಿರ್ಬಂಧವನ್ನು ಯುಎಇ ತೆರವುಗೊಳಿಸಿದೆ.
ಈ ಮೂಲಕ ಸೆ.12 ರಿಂದ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಮಾಡಿರುವ ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡಿರುವ ಭಾರತ, ಪಾಕಿಸ್ತಾನ ಮತ್ತು ಇತರ 13 ದೇಶಗಳ ನಿವಾಸಿಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮರಳ ಬಹುದಾಗಿದೆ.
ಅದರಂತೆ ಯುಎಇಗೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡ, ಸಿಯೆರಾ ಲಿಯೋನ್, ಲೈಬೀರಿಯಾ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಅಫ್ಘಾನಿಸ್ತಾನದ ನಿವಾಸಿಗಳು ಮರಳಬಹುದಾಗಿದೆ. ಹಾಗೂ ಪ್ರವೇಶದ ಬಳಿಕ ಅವರಿಗೆ ಇನ್ನಿತರ ವಿಚಾರಗಳನ್ನು ಸರಿಪಡಿಸಿ ಕೊಳ್ಳಬಹುದಾಗಿದೆ’ ಎಂದು ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಬಿಕ್ಕಟ್ಟು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಈ ನಡುವೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವ ಪ್ರಕಾರ, ಯುಎಇಯ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಒಂದು ವರ್ಷದ ವಿಳಂಬದ ನಂತರ ಅಕ್ಟೋಬರ್ 1 ರಂದು ಎಕ್ಸ್‌ಪೋ 2020 ವಿಶ್ವ ಮೇಳವನ್ನು ತೆರೆಯಲು ತಯಾರಿ ನಡೆಸುತ್ತಿದೆ. ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಕೇಂದ್ರವಾದ ಈ ದೇಶ ತನ್ನ ಆರ್ಥಿಕತೆಗೆ ಉತ್ತೇಜನ ನೀಡಲು ಮೇಳವನ್ನು ಅವಲಂಬಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಈ ಹಿಂದೆ ಎಕ್ಸ್‌ಪೋ 2020 ರ ಸಮಯದಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಯಲು ಉಳಿದ ಯುಎಇ ವಿಮಾನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಸಂಘಟಕರು ಹೇಳಿದ್ದರು. ಯುಎಇ ಗೆ ತೆರಳುವ ನಿವಾಸಿ ಗಳು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್‌ಶಿಪ್ (ಐಸಿಎ) ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಯುಎಇ ಗೆ ಆಗಮಿಸುವ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಲಸಿಕಾ ಪ್ರಮಾಣಪತ್ರವನ್ನು ನೀಡಬೇಕು. ಅನುಮೋದಿತ ಪ್ರಯೋಗಾಲಯದಲ್ಲಿ ನಿರ್ಗಮನದ 48 ಗಂಟೆಯೊಳಗಡೆ ನಡೆಸಿದ, ಕ್ಯೂ ಆರ್ ಕೋಡ್ ಹೊಂದಿರುವ ನೆಗೆಟಿವ್ ಪಿಸಿಆರ್ ಟೆಸ್ಟ್ ಫಲಿತಾಂಶವನ್ನು ನೀಡಬೇಕು.
ಪ್ರಯಾಣಿಕರು ವಿಮಾನ ಹತ್ತುವ ಮುನ್ನ ರ್ಯಾ ಪಿಡ್ ಪಿಸಿಆರ್ ಟೆಸ್ಟ್ ಹಾಗೂ ನಾಲ್ಕನೇ ಮತ್ತು 8ನೇ ದಿನದಂದು ಮತ್ತೊಂದು ಪಿಸಿಆರ್ ಪರೀಕ್ಷೆಯನ್ನು ಕೈಗೊಳ್ಳಬೇಕು ಹಾಗೂ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ತಿಳಿಸಿದೆ ಹಾಗೂ 16 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಿಗೆ ಈ ಕಾರ್ಯ ವಿಧಾನಗಳಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.