ಉಡುಪಿಯ ಪ್ರಸಿದ್ಧ ‘ರಾಧಾ ಮೆಡಿಕಲ್ಸ್’ನ ನೂತನ ಶಾಖೆ ಕುಂದಾಪುರದಲ್ಲಿ ಶುಭಾರಂಭ
ಕುಂದಾಪುರ ಸೆ.11: ಉಡುಪಿಯ ಪ್ರಸಿದ್ಧ ರಾಧಾ ಮೆಡಿಕಲ್ಸ್ ನ ನೂತನ ಶಾಖೆ ಕುಂದೇಶ್ವರ ದ್ವಾರದ ಎದುರಿನ ಮುಖ್ಯ ರಸ್ತೆಯಲ್ಲಿ ಶುಭಾರಂಭಗೊಂಡಿದೆ.
ನೂತನ ಶಾಖೆಯನ್ನು ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿವಿದೆಡೆ ಶಾಖೆಗಳನ್ನು ತೆರೆದು ಹೆಸರು ಗಳಿಸಿರುವ ರಾಧಾ ಮೆಡಿಕಲ್ಸ್ ಸಂಸ್ಥೆ ಕುಂದಾಪುರದಲ್ಲಿ ಆರಂಭವಾದುದು ತಾಲೂಕಿಗೆ ಹೆಮ್ಮೆ. ಈ ಸಂಸ್ಥೆಯಿಂದ ಗ್ರಾಹಕರಿಗೆ ಇಲ್ಲಿಯೂ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅವರು ಮಾತನಾಡಿ,ಎಲ್ಲಾ ಬಗೆಯ ಔಷಧ, ಮೆಡಿಕಲ್ ಉಪಕರಣಗಳು ಒಂದೇ ಸೂರಿನಡಿ ದೊರೆಯುವಂತಾದ ಕಾರಣ ಅನುಕೂಲವಾಗಲಿದೆ ಎಂದರು. ಸಾಯಿರಾಧಾ ಗ್ರೂಪ್‌ನ ಎಂಡಿ ಮನೋಹರ ಎಸ್. ಶೆಟ್ಟಿ ಅವರು ಮಾತನಾಡಿ, ಚಾನೆಲ್ ಪಾಲುದಾರರಾಗಿ ಸಂಸ್ಥೆಯ ಫ್ರಾಂಚೈಸಿ ನೀಡುವ ಪರಿಪಾಠ ಇದೇ ಮೊದಲು. ಕುಂದಾಪುರದಲ್ಲಿ ಕಾರಂತ ಸಹೋದರರ ಮೂಲಕ ಇದು ಆರಂಭವಾಗಿದ್ದು ಇದೇ ಮಾದರಿಯಲ್ಲಿ ಬೇರೆಡೆಗಳಲ್ಲೂ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಉಜ್ವಲ್ ಗ್ರೂಪ್‌ನ ಎಂ.ಡಿ ಪುರುಷೋತ್ತಮ ಪಿ. ಶೆಟ್ಟಿ, ಕುಂದಾಪುರ ವಿನಯ್ ನರ್ಸಿಂಗ್ ಹೋಂನ ಡಾ. ವಿಶ್ವನಾಥ ಶೆಟ್ಟಿ ಕುಂದಾಪುರ, ಹೊಟೇಲ್ ಪಾರಿಜಾತದ ರಾಮಚಂದ್ರ ಭಟ್ ಪಿ.ಎನ್., ಪುರಸಭೆ ಸದಸ್ಯರಾದ ಪ್ರೇಮಲತಾ ರಮೇಶ್ ಪೂಜಾರಿ, ದೇವಕಿ ಸಣ್ಣಯ್ಯ, ಉದಯ ಕಾರಂತ, ಶಾರದಾ ಕಾರಂತ್ ಉಪ್ಪಿನಕುದ್ರು, ರಾಧಾ ಮೆಡಿಕಲ್ ನ ಚಾನೆಲ್ ಪಾಲುದಾರ ರಾಜೇಶ್ ಕಾರಂತ್ ಉಪ್ಪಿನ ಕುದ್ರು, ರವಿ ಶೆಟ್ಟಿ ಮುಂಬಯಿ, ಮೆಡಿಕಲ್ಸ್ ನ ಎಚ್ ಆರ್ ಮ್ಯಾನೇಜರ್ ದಿನಕರ ರಾವ್ ಉಪಸ್ಥಿತರಿದ್ದರು.
ಇನ್ನು ನೂತನವಾಗಿ ಆರಂಭಗೊಂಡಿರುವ ರಾಧ ಮೆಡಿಕಲ್ಸ್ ನಲ್ಲಿ, ಇಲ್ಲಿ ಆಯುರ್ವೇದ, ಜೆನೆರಿಕ್, ಸರ್ಜಿಕಲ್ಸ್ ವೆಟರ್ನರಿ ಔಷಧ, ಜನರಲ್, ಕಾಸ್ಟೆಟಿಕ್ಸ್ ಬೇಬಿಕೇರ್, ಫಿಟ್‌ನೆಸ್ ಮತ್ತು ನ್ಯೂಟ್ರಿಷನ್ ಉತ್ಪನ್ನಗಳು, ಬ್ಯೂಟಿ ಪ್ರಾಡಕ್ಟ್ಸ್ ಸುಗಂಧ ದ್ರವ್ಯ, ಆಹಾರ ಮತ್ತು ಪಾನೀಯಗಳು, ಪರ್ಸನಲ್ ಕೇರ್ ಪರಿಕರಗಳು ಲಭಿಸಲಿವೆ ಎಂದು ಪ್ರಕಟನೆ ತಿಳಿಸಿದೆ.