ಕಾರ್ಕಳ: ಪ್ರಾರ್ಥನಾ ಮಂದಿರದ ಮೇಲೆ ದಾಳಿ ಅಮೃತ್ ಶೆಣೈ ಖಂಡನೆ

ಉಡುಪಿ‌: ಕಾರ್ಕಳದಲ್ಲಿ ನಿನ್ನೆ ಪ್ರಾರ್ಥನಾ ಮಂದಿರದ ಮೇಲೆ ನಡೆದ ದಾಳಿಯನ್ನು” ಸಹಬಾಳ್ವೆ ಉಡುಪಿ ” ಇದರ ಅಧ್ಯಕ್ಷ ಅಮೃತ್ ಶೆಣೈ ಖಂಡಿಸಿದ್ದಾರೆ

ಯಾವುದೇ ಕಾನೂನು ಬಾಹಿರ ಚಟುವಟಿಕೆ ಎಲ್ಲೂ ಕಂಡು ಬಂದರೆ ಸಮೀಪದ ಪೋಲಿಸ್ ಠಾಣೆಗೆ ತಿಳಿಸುವುದುಜವಾಬ್ದಾರಿಯುತ ನಾಗರಿಕರ ಕರ್ತವ್ಯ, ಅದನ್ನು‌ ಹೊರತು‌ ಪಡಿಸಿ ತಂಡೋಪತಂಡವಾಗಿ ಹೋಗಿ ದಾಳಿ ನಡೆಸಲು‌ ಹಿಂದೂ ಜಾಗರಣಾ ವೇದಿಕೆ ಯವರಿಗೆ ಅಧಿಕಾರ ನೀಡಿದವರಾರು? ಬಿಜೆಪಿ ಸರಕಾರದ ಮೇಲೆ ಹಾಗೂ ಸಚಿವ ಸುನೀಲ್ ಮೇಲೆ ಇವರಿಗೆ ನಂಬಿಕೆ ಇಲ್ಲವೇ ಅಥವಾ ಸರಕಾರವೇ ತಮಗೆ ಕಾಪಾಡುತ್ತದೆ ಎಂಬ ಧೈರ್ಯದಲ್ಲಿ ಇವರು‌ ಕಾನೂನನ್ನು ಕೈಗೆತ್ತಿಕೊಂಡರಾ? ಎಂದೂ ಅವರು ಪ್ರಶ್ನಿಸಿದ್ದಾರೆ.

ಉಡುಪಿ‌ ಜಿಲ್ಲೆಯ ಲ್ಲಿಶಾಂತಿಯುತ ಸಹಬಾಳ್ವೆಗೆ ಧಕ್ಕೆ ತರುವ ಯಾವುದೇ ಘಟನೆಗಳ, ಶಕ್ತಿಗಳ‌ ಹಾಗೂ‌ ವ್ಯಕ್ತಿಗಳ ವಿರುದ್ಧ ಸಹಬಾಳ್ವೆ ತಂಡದ ಪದಾಧಿಕಾರಿಗಳು ಶಾಂತಿಯುತ ಹೋರಾಟ ನಡೆಸುತ್ತಾರೆ ಎಂದು ತಿಳಿಸಿದ ಅವರು ದಾಳಿ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

1 thought on “ಕಾರ್ಕಳ: ಪ್ರಾರ್ಥನಾ ಮಂದಿರದ ಮೇಲೆ ದಾಳಿ ಅಮೃತ್ ಶೆಣೈ ಖಂಡನೆ

  1. The ones who do this are politically motivated and nothing else. These hooligans just use Hindutva tool to promote their political propaganda and to create a sense of fear amongst people. If they were really bothered about Hindus and their existence, they would take up issues that are pertinent to living like inflation, unemployment, etc. as many are nowadays struggling to live their life.

Leave a Reply

Your email address will not be published. Required fields are marked *

error: Content is protected !!