ಹೆಬ್ರಿ: ಸೆಕ್ಷನ್ 144 (3) ನಡುವೆಯೇ ನಡೆಯುತ್ತಿದೆ ಭರ್ಜರಿ ಕೋಳಿ ಅಂಕ!
ಉಡುಪಿ: ಜಿಲ್ಲೆಯಲ್ಲಿ ಕರೋನಾ ತಾಂಡವ ಆಡುತ್ತಿದ್ದರೆ ಅತ್ತ ಕೋಳಿ ಅಂಕ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆಡೆ ಸೆಕ್ಷನ್ 144(3) ಜಾರಿಯಲ್ಲಿ ಎಂಬ ಘೋಷಣೆ, ಇನ್ನೊಂದೆಡೆ ಅದು ನಮಗಲ್ಲ ಎಂದು ರಾಜಾರೋಷವಾಗಿ ನಡೆಯುವ ಕೋಳಿ ಅಂಕ.
ಇಂದು ಹೆಬ್ರಿಯ ನಕ್ಸಲ್ ಪೀಡಿತ ನಾಡ್ಪಾಲು ಗ್ರಾಮದ ಅಜ್ಜೋಳ್ಳಿಯಲ್ಲಿ
ಯಾವುದೇ ಅತಂಕವಿಲ್ಲದೆ ಕೋಳಿ ಅಂಕ ನಡೆಯುತ್ತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಬಿಜೆಪಿ ಮುಖಂಡ, ಸಂಘಟನೆಯೊಂದರ ಅಧ್ಯಕ್ಷನ ನೇತೃತ್ವದಲ್ಲಿ ನಡೆದಿದೆ ಎನ್ನಲಾಗಿದೆ.
ಕೋಳಿ ಅಂಕದ ಕುರಿತು ಹೆಬ್ರಿ ಪೊಲೀಸ್‌ರಿಗೆ ಸ್ಥಳೀಯರು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಹಿರಿಯ ರಾಜಕೀಯ ನಾಯಕರ ಬೆಂಬಲದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.