ಜೆಡಿಎಸ್ ಎಂಎಲ್ ಸಿ ಬೋಜೇಗೌಡರಿಗೆ ಕೊರೋನಾ ಸೋಂಕು

ಬೆಂಗಳೂರು: ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ದೃಢವಾಗಿದೆ,ಇತ್ತೀಚೆಗಷ್ಟೇ ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೇಗೌಡ ಕೊರೋನಾ ಪರೀಕ್ಷೆ ತಪಾಸಣೆಗೊಳಗಾಗಿದ್ದರು. ಈಗ ಬೋಜೇಗೌಡರ​​​ ಕೊರೋನಾ ರಿಪೋರ್ಟ್​ ಬಂದಿದ್ದು, ಸೋಂಕು ಇರುವುದು ಧೃಡಪಟ್ಟಿದೆ. 

ಹೀಗಾಗಿ ಇವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಬೋಜೆಗೌಡ 14 ದಿನ ಹೋಮ್​​ ಕ್ವಾರಂಟೈನ್​​ನಲ್ಲಿ ಇರಬೇಕಾಗಿದೆ. ಅಲ್ಲಿಯತನಕ ತಮ್ಮ ಆರೋಗ್ಯದ ಬಗ್ಗೆ ಮಾತ್ರ ಗಮನಹರಿಸಬೇಕಿದೆ. 

ಏನಾದರೂ ಸಮಸ್ಯೆ ಇದ್ದರೆ ಕೂಡಲೇ ವೈದ್ಯರ ಗಮನಕ್ಕೆ ತರಬೇಕಿದೆ. ಕ್ಷೇತ್ರದ ಜನ, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಫೋನ್​​ನಲ್ಲಿ ಮಾತ್ರ ಸಂಪರ್ಕಕ್ಕೆ ಸಿಗಬಹುದು. ಎರಡು ವಾರಗಳ ಕಾಲ ಯಾರ ಭೇಟಿಗೂ ಅವಕಾಶವಿಲ್ಲ.

Leave a Reply

Your email address will not be published. Required fields are marked *

error: Content is protected !!