ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ!

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಗತ್ತಿನ ಅತ್ಯಂತ  ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕದ ಡೇಟಾ ಇಂಟಲಿಜೆನ್ಸ್  ಮಾರ್ನಿಂಗ್  ಕನ್ಸಲ್ಟ್  ಸಂಸ್ಥೆ ಜೂನ್ 2021ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ  ಮೊದಲ ಸ್ಥಾನ ಪಡೆದಿದ್ದಾರೆ.

ಈ ಸರ್ವೇ ಪ್ರಕಾರ, ಅಮೆರಿಕದ ಅಧ್ಯಕ್ಷ ಜೋ-ಬೈಡನ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿಶ್ವದ 13 ನಾಯಕರ ಪೈಕಿ ಅತ್ಯಂತ ಜನಪ್ರಿಯ ನಾಯಕರಾಗಿ ಪ್ರಧಾನಿ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ.

ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಶೇ. 70 ರಷ್ಟು ರೇಟಿಂಗ್ ನೊಂದಿಗೆ ಮೊದಲ ಸ್ಥಾನ ಪಡೆದರೆ,   ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಶೇ. 64 ರೊಂದಿಗೆ ಎರಡನೇ ಸ್ಥಾನ ಮತ್ತು  ಇಟಲಿ ಪ್ರಧಾನಿ  ಮಾರಿಯೋ ಡ್ರಾಗಿ ಶೇ. 63 ರೇಟಿಂಗ್ ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. 

ಜರ್ಮನಿ ಛಾನ್ಸಲರ್  ಏಂಜೆಲಾ ಮಾರ್ಕೆಲ್ ಶೇ. 52 ರೊಂದಿಗೆ ನಾಲ್ಕನೇ ಸ್ಥಾನ, ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹಾಗೂ ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ ಶೇ. 48 ರೊಂದಿಗೆ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ.

ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೇಜ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಕ್ರಮವಾಗಿ ಶೇ. 35, 34 ಹಾಗೂ 25 ರೇಟಿಂಗ್ ಪಡೆಯುವುದರೊಂದಿಗೆ  ಕೊನೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

1 thought on “ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ!

Leave a Reply

Your email address will not be published. Required fields are marked *

error: Content is protected !!