ಉಡುಪಿ: ಖಾಸಗಿ ಆಸ್ಪತ್ರೆಯ ನರ್ಸ್ ಡೆಂಗ್ಯೂಗೆ ಬಲಿ

ಉಡುಪಿ:(ಉಡುಪಿ ಟೈಮ್ಸ್ ವರದಿ) ಕೊರೋನಾ ಸೋಂಕಿನ ಹಾವಳಿ ನಡುವೆ ಖಾಸಗಿ ಆಸ್ಪತ್ರೆಯ ನರ್ಸ್ ಡೆಂಗ್ಯೂ ರೋಗಕ್ಕೆ ತುತ್ತಾಗಿ ಮೃತ ಪಟ್ಟಿದ್ದಾರೆ.


ಇಲ್ಲಿನ ಸಿಟಿಬಸ್ ನಿಲ್ದಾಣದ ಬಳಿಯ ಖಾಸಗಿ ಆಸ್ಪತ್ರೆಯ ನರ್ಸ್, ಬೆಳ್ಮಣ್ ನಿವಾಸಿ ದಿವ್ಯ (23)ಕಳೆದ ಕೆಲವು ದಿನಗಳಿಂದ ತೀವೃ ಜ್ವರದಿಂದ ಬಳಲುತ್ತಿದ್ದರು. ಸೋಮವಾರ ಜ್ವರವು ಉಬ್ಬಣಗೊಂಡ ಪರಿಣಾಮ ಯುವತಿಯನ್ನು ನಗರದ ಇನ್ನೊಂದು ಪ್ರಸಿದ್ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ದಾಖಲಿಸಿದ ಒಂದು ಗಂಟೆಯಲ್ಲಿ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!