ಅಮೆರಿಕ: ಕೊರೋನ ವೈರಸ್ ಲಸಿಕೆಯ 3ನೇ ಡೋಸ್’ಗೆ ಚಾಲನೆ!

ವಾಶಿಂಗ್ಟನ್, ಆ. 23: ಕೊರೋನ ವೈರಸ್ ಲಸಿಕೆಯ ಮೂರನೇ ಡೋಸ್ ನೀಡುವ ಅಭಿಯಾನಕ್ಕೆ ಅಮೆರಿಕದಲ್ಲಿ ಚಾಲನೆ ಸಿಕ್ಕಿರುವುದು ಹಲವು ನೈತಿಕ ಪ್ರಶ್ನೆಗಳನ್ನು ಎತ್ತಿದೆ.

ಜಗತ್ತಿನ ಬೃಹತ್ ಪ್ರಮಾಣದ ಜನರಿಗೆ ಇನ್ನೂ ಒಂದು ಡೋಸ್ ಲಸಿಕೆಯನ್ನೂ ನೀಡದಿರುವಾಗ ಶ್ರೀಮಂತ ದೇಶಗಳಲ್ಲಿ ಮೂರನೇ ಡೋಸ್ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದುರಾಗಿವೆ. ಈಗಾಗಲೇ ಎರಡು ಡೋಸ್ ಲಸಿಕೆಯನ್ನು ತೆಗೆದುಕೊಂಡರೂ, ಡೆಲ್ಟಾ ಪ್ರಭೇದದ ಸೋಂಕಿಗೆ ಒಳಗಾಗಿರುವವರಿಗೆ ಮೂರನೇ ಡೋಸ್ ಅಗತ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಯಾಕೆಂದರೆ, ಎರಡು ಡೋಸ್‌ಗಳನ್ನು ತೆಗೆದುಕೊಂಡರೂ ಡೆಲ್ಟಾ ಪ್ರಭೇದದ ಸೋಂಕಿಗೆ ಒಳಗಾಗುವವರು ಯಾವುದೇ ಲಸಿಕೆ ತೆಗೆದುಕೊಳ್ಳದ ಜನರಷ್ಟೇ ಪ್ರಮಾಣದಲ್ಲಿ ಸೋಂಕನ್ನು ಹರಡಲು ಸಮರ್ಥರಾಗುತ್ತಾರೆ ಎಂದು ಸಂಶೋಧನೆಗಳು ಹೇಳಿವೆ.
ಆದರೆ ಮೂರನೇ ಡೋಸ್ ತೆಗೆದುಕೊಂಡವರ ರಕ್ತದಲ್ಲಿ ಪ್ರತಿಕಾಯಗಳ ಮಟ್ಟ ಹಿಂದೆ ಎರಡು ಡೋಸ್‌ಗಳನ್ನು ತೆಗೆದು ಕೊಂಡಿದ್ದಾಗ ಏರಿದ್ದ ಮಟ್ಟಕ್ಕೆ ಮತ್ತೆ ಏರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!