1 ಕೋಟಿಗೂ ಹೆಚ್ಚು ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ -90 ಸಾವಿರ ವ್ಯಾಪಾರಿಗಳ ನೋಂದಣಿ

ನವದೆಹಲಿ: ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ನೀಡುವ ಯೋಜನೆಯು ಭಾರಿ ಯಶಸ್ಸುಗಳಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಯೋಜನೆಯಡಿ ಈಗಾಗಲೇ 1 ಕೋಟಿಗೂ ಹೆಚ್ಚು ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ನೀಡಲಾಗಿದೆ. 90,000ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ದಿನ ಸುಮಾರು 4 ಲಕ್ಷ ಆಭರಣಗಳಿಗೆ ಹಾಲ್‌ಮಾರ್ಕ್ ನೀಡಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯದ ಮೊದಲ ಹಂತವು ಜಾರಿಗೆ ಬಂದು 50 ದಿನಗಳು ಕಳೆದಿದ್ದು, ಅಭೂತಪೂರ್ವ ಯಶಸ್ಸನ್ನು ಕಂಡಿದೆ. 1 ಕೋಟಿಗೂ ಅಧಿಕ ಚಿನ್ನಾಭರಣಗಳನ್ನು ಹಾಲ್‌ಮಾರ್ಕ್ ಮಾಡಲಾಗಿದೆ ಎಂದು ಭಾರತೀಯ ಮಾನದಂಡ ಮಂಡಳಿಯ (ಬಿಐಎಸ್‌) ಪ್ರಧಾನ ನಿರ್ದೇಶಕ ಪ್ರಮೋದ್‌ ಕುಮಾರ್ ತಿವಾರಿ ಮಾಹಿತಿ ನೀಡಿದ್ದಾರೆ.

ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಿದ ಬಳಿಕ, ಹಾಲ್‌ಮಾರ್ಕ್‌ಗೆ ನೋಂದಣಿ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳ ಸಂಖ್ಯೆಯು 35 ಸಾವಿರದಿಂದ 91,603ಕ್ಕೆ ಏರಿಕೆ ಆಗಿದೆ ಎಂದೂ ಅವರು ತಿಳಿಸಿದ್ದಾರೆ.

ಹಾಲ್‌ಮಾರ್ಕಿಂಗ್‌ಗಾಗಿ 2021ರ ಜುಲೈ 1ರಿಂದ ಆಗಸ್ಟ್ 20ರ ವರೆಗೆ 1.17 ಕೋಟಿ ಆಭರಣಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ 1.2 ಕೋಟಿ ಆಭರಣಗಳಿಗೆ ಹಾಲ್‌ಮಾರ್ಕ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!