ನಂದಿನಿ ಸಿಹಿ ಉತ್ಸವ: ಆ.19 ರಿಂದ ಶೇ.10% ರಿಯಾಯಿತಿ ಪ್ರಾರಂಭ

ಉಡುಪಿ: ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಸಮೃದ್ಧಿ ಹೊಂದಿರುವುದರಿಂದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ವರ್ಷದಲ್ಲಿ ಎರಡು ಬಾರಿ ಸಿಹಿ ಉತ್ಸವ ಆಚರಿಸುತ್ತಿದ್ದು, ಸದರಿ ಉತ್ಸವದ ಅವಧಿಯಲ್ಲಿ ‘ನಂದಿನಿ‘ಯ ಸಿಹಿ ಉತ್ಪನ್ನಗಳಿಗೆ ಶೇ.10% ರಿಯಾಯಿತಿಯನ್ನು ನೀಡುವ ಗ್ರಾಹಕ ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ.

ಆ.19 ರಿಂದ ಆ. 31 ತನಕ ಒಟ್ಟು 13 ದಿನಗಳ ಕಾಲ ಸಿಹಿ ಉತ್ಸವವನ್ನು ಆಚರಿಸುತ್ತಿದ್ದು, ಈ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಂದಿನಿ ಉತ್ಪನ್ನಗಳನ್ನು ಇನ್ನಷ್ಟು ಜನರಿಗೆ ಪರಿಚಯಿಸಿ ನಂದಿನಿಯ ಮಾರುಕಟ್ಟೆಯನ್ನು ವಿಸ್ತರಿಸಿ ಕೊಂಡು ರಾಜ್ಯದ ಹೈನುಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!