ಉಡುಪಿ: ಕೊರೋನಾ ನಿಯಂತ್ರಣಕ್ಕಾಗಿ 14 ತಂಡಗಳ ರಚನೆ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ಮೆಂಟ್ ಗಾಗಿ, ಸಾರ್ವಜನಿಕರ ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಕಾರ್ಯನಿರ್ವಹಿಸಲು ಜಿಲ್ಲೆಯಲ್ಲಿ 14 ಕಾರ್ಯ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದು, ಎಲ್ಲಾ ತಂಡಗಳು ಸಂಘಟಿತ ಹಾಗೂ ಸಮನ್ವಯ ರೀತಿಯಲ್ಲಿ ಕಾರ್ಯನಿರ್ವಹಿಸಿ ಪ್ರತಿ ದಿನದ ವರದಿಯನ್ನು ನೀಡುವಂತೆ ಆದೇಶಿಸಿದ್ದಾರೆ.
ತಂಡಗಳು: 1.ಕೋವಿಡ್ 19 ಸೋಂಕಿತ ವ್ಯಕ್ತಿಗಳನ್ನು ಸಿಸಿಡಿ/ಡಿಸಿಎಚ್‍ಸಿ/ಡಿಸಿಎಚ್ ಗಳಿಗೆ ಸ್ಥಳಾಂತರ,
2. ಕೋವಿಡ್ ಆರೈಕೆ ಕೇಂದ್ರಗಳು (ಸಿಸಿಸಿ)
3.ಸಮರ್ಪಿತ ಕೋವಿಡ್ -19 ಆರೋಗ್ಯ ಕೇಂದ್ರ ಕೋವಿಡ್ 19 ಆಸ್ವತ್ರೆಗಳು (ಡಿಸಿಎಚ್/ಡಿಸಿಎಚ್)
4. ಸಂಪರ್ಕ ಪತ್ತೆ ಹಚ್ಚುವಿಕೆ
5.ಪರೀಕ್ಷೆ, 6.ಕಂಟೈನ್‍ಮೆಂಟ್ ವಲಯಗಳು
7.ಕ್ವಾರಂಟೈನ್ ನಿಗಾವಣಿ(ಹೋಂ ಕ್ವಾರಂಟೈನ್ –ಎಚ್ ಕ್ಯೂ) ಮತ್ತು ಸಿಕ್ಯೂಎಎಸ್ ಹಾಗೂ ಆರೋಗ್ಯ ಸೇತು(ಎಎಸ್)
8. ಸಾಮಾಜಿಕ ಅಂತರ (ಮುಖ ಗವಸು ಧರಿಸುವುದು,ಸಾಮಾಜಿಕ ಅಂತರ ಕಾಯುವುದು,ಬೃಹತ್ ಗುಂಪು ಗೂಡುವಿಕೆಯನ್ನು ತಡೆಯುವುದು, ಉಗಿಯುವುದನ್ನು ತಡೆಯುವುದು.ಇತ್ಯಾದಿ)
9. ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಜ್ವರ ಚಿಕಿತ್ಸಾಲಯಗಳಿಂದ (ಕೆಪಿಎಂಇ ಮತ್ತು ಔಷದಿ ಕೇಂದ್ರಗಳು)ಐಎಲ್ ಐ/ಎಸ್ ಅ ಅರ್ ಐ ಪ್ರಕರಣಗಳು
10. ಜಿಲ್ಲಾ ನಿಯಂತ್ರಣ ಕೊಠಡಿ(ಆರೋಗ್ಯ ಪೊಲೀಸ್ ಮತ್ತು ಕಂದಾಯ)
11. ಮೃತ ದೇಹದ ನಿರ್ವಹಣೆ
- ರಸ್ತೆ ಮತ್ತು ರೈಲಿನ ಮೂಲಕ ಅಂತರ್ ರಾಜ್ಯ ಪ್ರಯಾಣಿಕರು (ಅಂತರ್ ರಾಜ್ಯ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಿಗೆ ಮತ್ತು ಪ್ರಮುಖವಾದ ರೈಲ್ವೆ ನಿಲ್ದಾಣ ಹೊಂದಿರುವ ಜಿಲ್ಲೆಗಳಿಗೆ) 13.
- ವಿಮಾನಯಾನ ಮತ್ತು ನೌಕಯಾನದ ಮೂಲಕ ಪ್ರಯಾಣಿಸುವ ಅಂತರ್ ರಾಜ್ಯ ಪ್ರಯಣಿಕರು(ವಿಮಾನ ನಿಲ್ದಾಣ ಮತ್ತು ಹಡಗು
ನಿಲ್ದಾಣಗಳನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳು) - ಮಾತೃ ಮತ್ತು ಮಗುವಿನ ಆರೋಗ್ಯ ಸೇವಾ ಕಾರ್ಯಕ್ರಮ.