ದೇಶದಲ್ಲಿ 1000 ಖೇಲೋ ಇಂಡಿಯಾ ಕೇಂದ್ರಗಳ ಸ್ಥಾಪನೆ- ಪ್ರಧಾನಿ ಮೋದಿ

ನವದೆಹಲಿ: ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು ದೇಶಾದ್ಯಂತ ಸುಮಾರು 1000 “ಖೇಲೋ ಇಂಡಿಯಾ” ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತೀಯ ಪ್ಯಾರಾ ಒಲಿಂಪಿಯನ್ ಸದಸ್ಯರಿಗೆ ಹೇಳಿದ್ದಾರೆ.

ಇಂದು ಪ್ಯಾರಾ-ಒಲಿಂಪಿಯನ್‌ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ಸರ್ಕಾರ ಆಟಗಾರರನ್ನು ತಲುಪಲು ಪ್ರಯತ್ನಿಸುತ್ತಿದೆ, ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.

“ದೇಶದಲ್ಲಿ ಪ್ರಸ್ತುತ 360 ಖೇಲೋ ಇಂಡಿಯಾ ಕೇಂದ್ರಗಳಿದ್ದು, ಅವುಗಳನ್ನು 1000 ಕ್ಕೆ ಹೆಚ್ಚಿಸಲಾಗುವುದು.
“ನೀವು ಯಾವುದೇ ರಾಜ್ಯ, ಪ್ರದೇಶಕ್ಕೆ ಸೇರಿದವರಾಗಿದ್ದರೂ, ನೀವು ಯಾವುದೇ ಭಾಷೆ ಮಾತನಾಡುವವರಾಗಿದ್ದರೂ ಸರಿ ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನೀವು ಟೀಮ್ ಇಂಡಿಯಾ. ಈ ಮನೋಭಾವವು ನಮ್ಮ ಸಮಾಜದ ಪ್ರತಿಯೊಂದು ಭಾಗವನ್ನು ವ್ಯಾಪಿಸಬೇಕು” ಎಂದರು.

“ಇಂದಿನ ನವ ಭಾರತವು ಪದಕಕ್ಕಾಗಿ ಕ್ರೀಡಾಪಟುಗಳ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಆದರೆ ಅವರು ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂದು ನಿರೀಕ್ಷಿಸುತ್ತದೆ. ದೇಶವು ನಮ್ಮಲ್ಲಿರುವ ಕ್ರೀಡಾಪಟುಗಳೊಂದಿಗೆ ಸದೃಢವಾಗಿದೆ
. ಅವರು ಗೆದ್ದರೂ ಸೋತರೂ ಪ್ರಯತ್ನ ಮುಖ್ಯ ಎಂದು ಪ್ರಧಾನಿ ಹೇಳಿದರು. 

ಪ್ಯಾರಾ ಅಥ್ಲೀಟ್‌ಗಳ ಕುಟುಂಬ ಸದಸ್ಯರು, ಪಾಲಕರು ಮತ್ತು ತರಬೇತುದಾರರು ಕೂಡ ವರ್ಚುವಲ್‌ ನಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!