ಉಡುಪಿ: ಹಾಲ್ ಮಾರ್ಕ್ ಕಡ್ಡಾಯ- ಚಿನ್ನಬೆಳ್ಳಿ ಕೆಲಸಗಾರರ ಸಂಘದಿಂದ ಶಾಸಕರಿಗೆ ಮನವಿ
ಉಡುಪಿ: ಹೊಸದಾಗಿ ಜಾರಿಯಾಗುವ ಹಾಲ್ ಮಾರ್ಕಿನ ಕಡ್ಡಾಯದಿಂದಾಗುವ ಸಮಸ್ಯೆ ಬಗ್ಗೆ ಚಿನ್ನಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಅವರೊಂದಿಗೆ ಚರ್ಚೆ ನಡೆಸಿ ಮನವಿಯನ್ನು ನೀಡಲಾಯಿತು.
ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನೂತನ ಕಾಯಿದೆಯಿಂದ ಕುಶಲಕರ್ಮಿಗಳಿಗೆ ಆಗುವ ತೊಂದರೆ ಬಗ್ಗೆ ಸಂಸದರ ಗಮನಕ್ಕೆ ತರುವುದಾಗಿ ಭರವಸೆಯನ್ನು ನೀಡಿದರು. ನಾಳೆ ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಗೆ ಆಗಮಿಸಲಿದ್ದು, ಅವರಲ್ಲಿ ಚಿನ್ನ ಬೆಳ್ಳಿ ಕೆಲಸಗಾರರಿಗೆ ನ್ಯಾಯ ಸಿಗುವ ಹಾಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಿನ್ನ ಬೆಳ್ಳಿ ಕೆಲಸಗಾರ ಸಂಘದ ಅಧ್ಯಕ್ಷರಾದ ಕಿಶೋರ್ ಆರ್. ಆಚಾರ್ಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಉಪಾಧ್ಯಕ್ಷ ಪ್ರಭಾಕರ ಆಚಾರ್ಯ,ಪ್ರ.ಕಾರ್ಯದರ್ಶಿ ಪ್ರಶಾಂತ ಆಚಾರ್ಯ, ಕೋಶಾಧಿಕಾರಿ ರವಿಚಂದ್ರ ಆಚಾರ್ಯ ಮಾರಳಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ನಗರಸಭಾ ಸದಸ್ಯ ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.