ಕಾರ್ಕಳ: ವಿಜೇತ ವಿಶೇಷ ಶಾಲೆಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ

ಕಾರ್ಕಳ: ವಿಜೇತ ವಿಶೇಷ ಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ  ಧ್ವಜಾರೋಹಣ ಕಾರ್ಯಕ್ರಮವನ್ನು ರಶ್ಮಿ  ಚಾರಿಟೇಬಲ್ ಟ್ರಸ್ಟ್ ಹಾಗೂ ಕಾರ್ಕಳ ಬಿಲ್ಲವ ಸಂಗದ ಅಧ್ಯಕ್ಷ ಡಿ. ಆರ್. ರಾಜು ಇವರು ನೆರವೇರಿಸಿದರು.

ವಿಜಯ್ ಅಯ್ಯಂಗಾರ್ ಉದ್ಯಮಿಗಳು ಬಿ.ಸಿ.ರೋಡ್ ಕೈಕಂಬ ಇವರು ಸಬಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಶುಭ ಹಾರೈಸಿ,  ಶಾಲೆಗೆ ಅವಶ್ಯಕವಿರುವ ಸುಮಾರು 20 ಸಾವಿರ ಮೌಲ್ಯದ ಅಡುಗೆ ಪಾತ್ರೆಗಳನ್ನು ದೇಣಿಗೆಯಾಗಿ ಹಸ್ತಾಂತರಿಸಿದರು.

ಕುಂದಾಪುರದ ರಕ್ಷಿತ್ ಕುಮಾರ್ ವಂಡ್ಸೆ ವಿಜೇತ ವಿಶೇಷ ಶಾಲಾ ಸುಮಾರು 80 ವಿದ್ಯಾರ್ಥಿಗಳಿಗೆ ಉಚಿತವಾಗಿ ಮಣಿಪಾಲ್ ಆರೋಗ್ಯ ಕಾರ್ಡನ್ನು ಹಸ್ತಾಂತರಿಸಿದರು.

ಸಂದೀಪ್ ದೇವಾಡಿಗ ಮತ್ತು ರಂಜಿತಾ ಸಂದೀಪ್ ದಂಪತಿಗಳ ಮಗು ಮಾ.ಮಿಥಾ0ಶ್ ನ ಸ್ಮರಣಾರ್ಥ* ಇಂದು ವಿಜೇತ ವಿಶೇಷ ಶಾಲೆಗೆ 1 ಲಕ್ಷ ರೂಪಾಯಿಗಳನ್ನು ದೇಣಿಗೆ ಹಸ್ತಾಂತರಿಸಿ ಇಂದಿನ ಕಾರ್ಯಕ್ರಮಕ್ಕೆ  ವಿಶೇಷ ಭೋಜನದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಮಂಜುನಾಥ್ ಜನಪ್ರಿಯ ರೈಸ್ ಮಿಲ್ ಮಾಲ್ಹಕರು,  ಪ್ರಾಥಮಿಕ ಆರೋಗ್ಯ ಕೇಂದ್ರ ನಕ್ರೆಯ ಸುರಕ್ಷಾದಿಕಾರಿಗಳಾದ ಕುಮುದಾವತಿ, ಕು. ಅನಿತಾ,ಹಾಗೂ  ಶ್ರೀದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಸ್ವಪ್ತ ಸ್ವರ ಮೆಲೋಡಿಯಸ್ ತಂಡದ ಮುಖ್ಯಸ್ಥರು  ಶ್ರೀ ಉಮೇಶ್ ಕೋಟ್ಯಾನ್,  ವಾಮದಪದವು,ವಿಷ್ಣು ಪ್ರಸಾದ್, ಪ್ರವೀಣ್ ಮತ್ತು ಡೈನಾ ದಂಪತಿಗಳು, ಮೇಲ್ವಿನ್, ರಕ್ಷಿತ್ ಶೆಟ್ಟಿ ಕುಂದಾಪುರ,  ಎ. ಪಿ.ಎಂ.ಸಿ ಹಾಗೂ ವಿಜೇತ ಶಾಲಾ ಅಧ್ಯಕ್ಷರಾದ ರತ್ನಾಕರ್ ಅಮೀನ್, ಶಾಲಾ ಕೋಶಾಧಿಕಾರಿ ಸಿಯಾ ಸಂತೋಷ್ ನಾಯಕ್, ಸಂಸ್ಥಾಪಕಿ ಡಾ. ಕಾಂತಿ ಹರೀಶ್  ಉಪಸ್ಥಿತರಿದ್ದರು. ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ, ಡಾ. ಕಾಂತಿ ಹರೀಶ್ ಸ್ವಾಗತಿಸಿ, ಕು ಶ್ರುತಿ ಶೆಟ್ಟಿ ವಂದಿಸಿದರು. 
 ಸಪ್ತಸ್ವರ ಮೆಲೋಡಿಯಸ್ ತಂಡದ ಉಮೇಶ್ ಕೋಟ್ಯಾನ್ ವಾಮದಪದವು ತಂಡದ ಪ್ರಸಿದ್ಧ ಗಾಯಕರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು. 

Leave a Reply

Your email address will not be published. Required fields are marked *

error: Content is protected !!