‘ಶ್ರೀಕೃಷ್ಣ ಅಸ್ಸಯಿಂಗ್ & ಹಾಲ್ ಮಾರ್ಕಿಂಗ್’ ಚಿನ್ನಾಭರಣಗಳ ಗುಣಮಟ್ಟ ಮಾಪನ ಕೇಂದ್ರ ಉದ್ಘಾಟನೆ
ಉಡುಪಿ ಆ.16(ಉಡುಪಿ ಟೈಮ್ಸ್ ವರದಿ): ಭಾರತೀಯ ಮಾನದಂಡಗಳ ಮಾಪನ ಸಂಸ್ಥೆಯ ಪರವಾನಿಗೆ ಪಡೆದ ಚಿನ್ನಾಭರಣಗಳ ಗುಣಮಟ್ಟದ ಮಾಪನ ಕೇಂದ್ರ “ಶ್ರೀಕೃಷ್ಣ ಅಸ್ಸಯಿಂಗ್ ಆ್ಯಂಡ್ ಹಾಲ್ ಮಾರ್ಕಿಂಗ್” ಸಂಸ್ಥೆ ರವಿವಾರ ಉದ್ಘಾಟನೆಗೊಂಡಿತು.
ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಮಣಿಪಾಲ್ ಸೆಂಟರ್ ನಲ್ಲಿ ಆರಂಭಗೊಂಡಿರುವ ಸಂಸ್ಥೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಅವರು ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಬ್ಯಾಂಕ್ ಆಫ್ ಬರೋಡಾದ ಹಿರಿಯ ವ್ಯವಸ್ಥಾಪಕ ಚರಣ್ ರಾಜ್, ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಫೆಡರೇಶನ್ ನ ಅಧ್ಯಕ್ಷ ಜಯ ಆಚಾರ್ಯ, ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ನಾಗರಾಜ ಆಚಾರ್ಯ, ಉಡುಪಿ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆರ್.ಆಚಾರ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಪಾಲುದಾರರಾದ ರೇಷ್ಮಾ ಶೆಟ್ಟಿ, ಭಾರತೀ ಪಾಟೀಲ್, ಅಂಡಾರು ದೇವಿಪ್ರಸಾದ್ ಶೆಟ್ಟಿ, ಪ್ರದೀಪ್ ಪಾಟೀಲ್ ಉಪಸ್ಥಿತರಿದ್ದರು.