ಕುಂದಾಪುರ: ಮತ್ತೆ ಮೂವರು ಬಸ್‌ ಚಾಲಕರಿಗೆ ಕೊರೋನಾ ಪಾಸಿಟಿವ್

ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್‌ ಚಾಲಕರ, ನಿರ್ವಾಹಕರ ಗಂಟಲ ದ್ರವದ ಪರೀಕ್ಷೆಗಳನ್ನು ಮಾಡಲಾಗಿದ್ದು, ಅದರ ವರದಿ ಇಂದು ಬಂದಿದ್ದು, 3 ಚಾಲಕರಿಗೆ ಕೋವಿಡ್ ಸೋಂಕು ಇರುವುದು ದೃಢವಾಗಿದೆ.

ಬಸ್ರೂರಿನ 58 ವರ್ಷದ, ಬಾಗಲಕೋಟೆ ಮೂಲದ 36 ವರ್ಷದ ಹಾಗೂ 44 ವರ್ಷದ ಮೂವರು ಬಸ್‌ ಚಾಲಕರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಮೂವರು ಕೂಡ ಕುಂದಾಪುರದಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳ ಚಾಲಕರಾಗಿದ್ದರು.

ಗುರುವಾರ ಕುಂದಾಪುರದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋದ ಸಿಬಂದಿ, ಬಸ್‌ ಚಾಲಕರು, ನಿರ್ವಾಹಕರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಅದರಲ್ಲಿ ಮೂವರಿಗೆ ಪಾಸಿಟಿವ್‌ ಬಂದಿದೆ.

ಕುಂದಾಪುರ – ಬೆಂಗಳೂರು ಬಸ್‌ ಚಾಲಕ 44 ವರ್ಷದವರಿಗೆ ಸೋಂಕು ದೃಢವಾಗಿದ್ದು, ಅವರನ್ನು ಕುಂದಾಪುರದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪೈಕಿ 58 ವರ್ಷದ ಬಸ್ರೂರು ಮೂಲದವರು ರಜೆಯಲ್ಲಿದ್ದು, ಅವರು ಲಾಕ್‌ಡೌನ್‌ ಬಳಿಕ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮತ್ತೂಬ್ಬ 36 ವರ್ಷದ ವ್ಯಕ್ತಿ‌ ಚಾಲಕರಾಗಿದ್ದು, ಅವರು ಕೂಡ ರಜೆಯಲ್ಲಿದ್ದು, ಬಾಗಲಕೋಟೆ ಊರಿಗೆ ತೆರಳಿದ್ದಾರೆ. ಸದ್ಯ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!