ಬಂಟಕಲ್ ಲಯನ್ಸ್ ಕ್ಲಬ್: ಚಿಕಿತ್ಸೆಗೆ 72,000 ರೂ. ಸಹಾಯಧನ ವಿತರಣೆ
ಉಡುಪಿ ಆ.16(ಉಡುಪಿ ಟೈಮ್ಸ್ ವರದಿ): ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕುಂಜಾರುಗಿರಿಯ ಸರಸ್ವತಿ ಅವರ ಚಿಕಿತ್ಸೆಗೆ ಬಂಟಕಲ್ ನ ಲಯನ್ಸ್ ಕ್ಲಬ್ ಹಾಗೂ ಜಾಸ್ಮಿನ್ ಲಯನ್ಸ್ ಕ್ಲಬ್ ವತಿಯಿಂದ 72,000 ರೂ. ಸಹಾಯಧನ ನೀಡಲಾಗಿದೆ.
ಕುಂಜಾರುಗಿರಿಯ ಕುರ್ಕಾಲು ಗ್ರಾಮದ ಶಂಕರ್ ಅವರ ಪತ್ನಿ ಸರಸ್ವತಿ ಅವರು ಎರಡೂ ಕಿಡ್ನಿ ವೈಫಲ್ಯ ರಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗೆ 7,50,000 ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ದಾನಿಗಳಿಂದ ಸಂಗ್ರಹಿಸಿದ ಹಣ ಇವರ ವೈದ್ಯಕೀಯ ಚಿಕಿತ್ಸೆಗೆ ಬಳಕೆಯಾಗುತ್ತಿತ್ತು. ಮೊದಲೇ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿರುವ ಕುಟುಂಬ ವೈದ್ಯರು ಚಿಕಿತ್ಸೆಗೆ ಸೂಚಿಸಿರುವ ಮೊತ್ತ ಹೊಂದಿಸಲು ಪರದಾಡುವಂತಾಗಿದೆ. ಸದ್ಯ ಸರಸ್ವತಿ ಅವರ ವೈದ್ಯಕೀಯ ಚಿಕಿತ್ಸೆ ಗೆ ಬಂಟಕಲ್ ನ ಲಯನ್ಸ್ ಕ್ಲಬ್ ಹಾಗೂ ಜಾಸ್ಮಿನ್ ಲಯನ್ಸ್ ಕ್ಲಬ್ ವತಿಯಿಂದ 72,000 ರೂ. ಸಹಾಯಧನದ ನೆರವು ನೀಡಿದೆ. ಇವರ ವೈದ್ಯಕೀಯ ಚಿಕಿತ್ಸೆಗೆ ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಇದೀಗ ಸರಸ್ವತಿ ಅವರ ಚಿಕಿತ್ಸೆಗೆ ಸಹಕಾರ ನೀಡಲು ಬಯಸುವವರು Name : saraswathiBank Name: CANARA BANKMADWA NAGARA PADUBELLEA/c Number : 110002152050IFSC Code: CNRB0010195 ಗೆ ಹಣ ಜಮೆ ಮಾಡಬಹುದಾಗಿದೆ.