| ಉಡುಪಿ: ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿರವರನ್ನು ಭೇಟಿಯಾಗಿ ದಲಿತರ ಭೂಮಿ ವಾಣಿಜ್ಯಾ ಪರಿವರ್ತನೆಗೆ ಇರುವ ನಿಬಂಧನೆಗಳನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಮನವಿ ಅರ್ಪಿಸಲಾಯಿತು.
ಈಗ ಇರುವ ಕಾನೂನಿನ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿಯನ್ನು ಕೇವಲ ಮನೆ ನಿರ್ಮಿಸುವ ಕಾರಣಕ್ಕಾಗಿ ಕೇವಲ 10 ಸೇಂಟ್ಸ್ ಮಾತ್ರ ಪರಿವರ್ತನೆ ಮಾಡಲು ಅವಕಾಶವಿದೆ , ಇದರಿಂದ ದಲಿತರು ತಮ್ಮ ಭೂಮಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಮಾಡಲು , ವಾಣಿಜ್ಯ ಕಟ್ಟಡ ಕಟ್ಟಲು ಅವಕಾಶವಿರುವುದಿಲ್ಲಾ. ಈ ನಿಬಂಧನೆಯನ್ನು ರದ್ದು ಮಾಡಿ ಇತರರಂತೆಯೇ ನಾವೂ ಕೂಡ ನಮ್ಮಲ್ಲಿರುವ ಭೂಮಿಯಲ್ಲಿ ಯಾವುದಾದರೂ ವಾಣಿಜ್ಯ ವ್ಯವಹಾರವನ್ನು ಮಾಡಿಕೊಂಡು ಸ್ವಂತ ಉದ್ಯೋಗ ರೂಪಿಸಿಕೊಳ್ಳಲು ಅವಕಾಶವಾಗುತ್ತದೇ ಎಂದು ಮನದಟ್ಟು ಮಾಡಲಾಯಿತು. ಆದಷ್ಟು ಶೀಘ್ರ ದಲಿತರ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆ ಮಾಡಲು ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕೆಂದು ಮನವಿ ಅರ್ಪಿಸಲಾಯಿತು.
ಎಸ್.ಸಿ.ಪಿ./ಟಿ.ಎಸ್.ಪಿ .ಅನುಧಾನವನ್ನು ದಲಿತರ ಮೂಲಭೂತ ಸ್ವಯಂ ಅಭಿವೃದ್ಧಿಗಾಗಿ ಬಳಕೆಗೆ ಮನವಿ ಸಮಾಜ ಕಲ್ಯಾಣ ಇಲಾಖೆಯಿಂದ ಮೀಸಲಿಟ್ಟಿರುವ ಎಸ್.ಸಿ.ಪಿ./ ಟಿ.ಎಸ್. ಪಿ . ಅನುಧಾನ ಸುಮಾರು 25000/-ಕೋಟಿ ರೂಪಾಯಿ ಹಣವನ್ನು ದಲಿತರ ಮೂಲಭೂತ ಸ್ವಯಂ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ, ವಸತಿ, ಮತ್ತು ಸ್ವ-ಉದ್ಯೋಗಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕೆಂದು ಮನವಿ ಕೊಡಲಾಯಿತು.
ಮನವಿಯನ್ನು ಕಾಳಜಿ ಮತ್ತು ಮುತುವರ್ಜಿಯಿಂದ ಕಾರ್ಯರೂಪಕ್ಕೆ ತರುವುದಾಗಿ ಬರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಬೆಂಗಳೂರಿನಲ್ಲಿ ಇಡೀ ರಾಜ್ಯದ ದಲಿತ ನಾಯಕರ ಸಭೆ ಕರೆದು ತಮ್ಮೆಲ್ಲಾ ಬೇಡಿಕೆ ಮತ್ತು ಅವಶ್ಯಕತೆಗಳ ಬಗ್ಗೆ ಅಭಿಪ್ರಾಯ ಕ್ರೋಢೀಕರಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ನಿಯೋಗದಲ್ಲಿ , ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು , ಶ್ಯಾಮಸುಂದರ ತೆಕ್ಕಟ್ಟೆ , ಮಂಜುನಾಥ್ ಬಾಳ್ಕುದ್ರು , ಶ್ರೀಧರ ಕುಂಜಿಬೆಟ್ಟು , ಮತ್ತು ಪದಾಧಿಕಾರಿಗಳಾದ ಶಿವಾನಂದ ಮೂಡುಬೆಟ್ಟು, ಎಸ್. ನಾರಾಯಣ , ವಡ್ಡರ್ಸೆ ಶ್ರೀನಿವಾಸ, ಶಿವಾನಂದ ಬಿರ್ತಿ, ಅನಿಲ ಬಿರ್ತಿ ಉಪಸ್ಥಿತರಿದ್ದರು. | |