ಕಾಪು: ತಾಯಿ ಮತ್ತು ನಾಲ್ಕುವರೆ ವರ್ಷದ ಮಗು ನಾಪತ್ತೆ
ಕಾಪು ಆ.16(ಉಡುಪಿ ಟೈಮ್ಸ್ ವರದಿ): ಮಹಿಳೆಯೊಬ್ಬರು ತನ್ನ ನಾಲ್ಕುವರೆ ವರ್ಷದ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ಕಾಪುವಿನಲ್ಲಿ ನಡೆದಿದೆ.
ಶಮೀನಾ(24), ಮೊಹಮ್ಮದ್ ಶಾನ್(4.5) ನಾಪತ್ತೆಯಾದವರು. ಶಮೀನಾ ಅವರು ಆ.13 ರಂದು ತನ್ನ ತಂದೆಯ ಮನೆಗೆ ಹೋಗಿದ್ದು ಬಳಿಕ ಅಲ್ಲಿಂದ ಸಂಜೆ ವೇಳೆಗೆ ಗಂಡನ ಮನೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಮಗನೊಂದಿಗೆ ತೆರಳಿದ್ದಾರೆ. ಆದರೆ ರಾತ್ರಿ ವೇಳೆ ಶಮೀನಾಳ ಗಂಡ ಅಬ್ಬಾಸ್, ಶಮಿನಾರ ತಂದೆಗೆ ಕರೆ ಮಾಡಿ ಶಮೀನಾ ಮತ್ತು ಮಗ ಮನೆಗೆ ಬಂದಿಲ್ಲ ನಿಮ್ಮ ಮನೆಯಲ್ಲಿ ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಳಿಕ ಮನೆಯವರು ಸೇರಿ ಶಮೀನಾ ಹಾಗೂ ಮಗುವನ್ನು ನೆರೆ ಕರೆಯಲ್ಲಿ ಹುಡುಕಾಡಿದ್ದರೂ ಅವರು ಪತ್ತೆತಾಗಿರಲಿಲ್ಲ.
ಈ ಬಗ್ಗೆ ಶಮೀನಾರ ತಂದೆ ಖಾಲಿದ್ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಶಮೀನಾರವರು ಕನ್ನಡ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆ ಬಲ್ಲವರಾಗಿದ್ದು, ಇವರ ಸುಳಿವು ಸಿಕ್ಕಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂ. 8020-2551033, ಮೊ.ಸಂ.9480805449,9480805466, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂ. 0820-2520333, 9480805431 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.