ಉಡುಪಿ ಆ.16(ಉಡಪಿ ಟೈಮ್ಸ್ ವರದಿ): ಬ್ರಹ್ಮಾವರ ಫೌಂಡೇಶನ್ ವತಿಯಿಂದ ದಾನಿಗಳ ನೆರವಿನಿಂದ ಎರಡು ಕಾಲನ್ನು ಕಳೆದುಕೊಂಡವರಿಗೆ ತ್ರಿಚಕ್ರ ಮೋಟಾರು ವಾಹನವನ್ನು ಉಚಿತವಾಗಿ ನೀಡಲಾಯಿತು.
ಸಕ್ಕರೆ ಕಾಯಿಲೆಯಿಂದಾಗಿ ತನ್ನ ಎರಡು ಕಾಲುಗಳನ್ನು ಮೊಣಕಾಲಿನವರೆಗೆ ಕಳೆದುಕೊಂಡಿದ್ದ ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಸಾಲಿಕೇರಿ ನಿವಾಸಿ ತಿಮ್ಮಪ್ಪ ಶೆಟ್ಟಿಗಾರ್ ಅವರಿಗೆ ಟ್ರಸ್ಟಿನ ಸಹಯೋಗದಲ್ಲಿ ದಾನಿಗಳ ನೆರವಿನಿಂದ ಸುಮಾರು 90,000 ರೂ.ಮೌಲ್ಯದ ತ್ರಿಚಕ್ರ ಯಂತ್ರಚಾಲಿತ ಮೋಟಾರು ವಾಹನವನ್ನು ಉಚಿತವಾಗಿ ನೀಡಲಾಗಿದೆ.
75ನೇ ಸ್ವಾತಂತ್ರೋತ್ಸವ ದಿನವಾದ ನಿನ್ನೆ ಸಾಲಿಕೇರಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ತಿಮ್ಮಪ್ಪ ಶೆಟ್ಟಿಗಾರ್ ಅವರಿಗೆ ತ್ರಿಚಕ್ರ ವಾಹನವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್‌ಮೂರ್ತಿ, ಕಂದಾಯ ಪರಿವೀಕ್ಷಕ ಲಕ್ಷ್ಮೀನಾರಾಯಣ ಭಟ್, ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಹೆಚ್.ರತ್ನಾಕರ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತಸರ ಬಾಲಕೃಷ್ಣ ಶೆಟ್ಟಿಗಾರ್, ಬ್ರಹ್ಮಾವರ ರೆಡ್ ಕ್ರಾಸ್ ಅಧ್ಯಕ್ಷ ರಾಜರಾಂ ಶೆಟ್ಟಿ, ಹೆಚ್ ದಯಾನಂದ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಮೋಹನ್ ದಾಸ್ ಪೈ, ಡೆರಿಕ್ ಡಿ’ಸೋಜಾ, ನಿರಂಜನ ಶೆಟ್ಟಿ, ಜಾಕೋಬ್ ಲೂವಿಸ್, ಜೈಸನ್ ಲೂವಿಸ್, ಸ್ಪ್ಯಾನಿ ವಾಸ್,ಜಾನ್ ಕ್ರಾಸ್ತಾ, ದೇವಕಿ ಪೂಜಾರಿ, ಶಶಿಕಲಾ .ಜಿ. ಹೆಗ್ಡೆ, ಪ್ರತೀತ್ ಹೆಗ್ಡೆ, ಪುಷ್ಪರಾಜ್ ಶೆಟ್ಟಿ, ಗಣೇಶ್ ಶ್ರೀಯಾನ್, ಪ್ರಕಾಶ್ ಶ್ರೀಯಾನ್, ನಿವೃತ್ತ ಕಂದಾಯ ನಿರೀಕ್ಷಕ ರಾಘವ ಶೆಟ್ಟಿಗಾರ್, ಜಗದೀಶ್ ಶೆಟ್ಟಿಗಾರ್, ಆಲ್ಬರ್ಟ್ ಮಂತೆರೊ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. | | |