ಉಡುಪಿ: ಮೆಗಾ ಲೋಕ್ ಅದಾಲತ್- ಒಂದೇ ದಿನ 3244 ಪ್ರಕರಣಗಳು ಇತ್ಯರ್ಥ
ಉಡುಪಿ ಆ.14(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಮೆಗಾ ಲೋಕ್ ಅದಾಲತ್ ನಲ್ಲಿ ಇಂದು ಒಂದೇ ದಿನದಲ್ಲಿ ಒಟ್ಟು 3244 ಪ್ರಕರಣಗಳು ಇತ್ಯರ್ಥಗೊಂಡಿದೆ.
ಈ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಇಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತನ್ನು ಆಯೋಜಿಸಲಾಗಿತ್ತು.
ಈ ಮೆಗಾ ಲೋಕ್ ಅದಲತ್ ನಲ್ಲಿ ಒಂದೇ ದಿನ ಒಟ್ಟು 3244 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಈ ಪೈಕಿ 54 ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ, 134 ಚೆಕ್ಕು ಅಮಾನ್ಯ ಪ್ರಕರಣ, 22 ಬ್ಯಾಂಕ್ ಹಣ ವಸೂಲಾತಿ ಪ್ರಕರಣ, 155 ಎಂ.ವಿ.ಸಿ ಪ್ರಕರಣ, 2 ಕಾರ್ಮಿಕ ವಿವಾದ, 21 ಎಂ.ಎಂ.ಆರ್.ಡಿ ಆಕ್ಟ್ ಪ್ರಕರಣ, 3 ವೈವಾಹಿಕ ಪ್ರಕರಣ, 1 ಭೂಸ್ವಾಧೀನ ಪ್ರಕರಣ, 158 ಸಿವಿಲ್ ಪ್ರಕರಣ, 2515 ಇತರೇ ಕ್ರಿಮಿನಲ್ ಪ್ರಕರಣಗಳು ಹಾಗೂ 179 ವ್ಯಾಜ್ಯ ಪೂರ್ವ ದಾವೆಗಳು ರಾಜೀ ಮುಖಾಂತರ 8,11,35,240 ರೂ. ನ್ನು ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪನಿಗಳು, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ನ್ನು ಯಶಸ್ವಿಗೊಳಿಸಲಾಯಿತು ಎಂದು ತಿಳಿಸಿದ್ದಾರೆ.