ಸಿಎಂ ಹೇಳಿಕೆ ಬೆನ್ನಲ್ಲೇ ನಗರದಲ್ಲಿ ಝೀರೋ ಟ್ರಾಫಿಕ್ ಸಂಚಾರ ವ್ಯವಸ್ಥೆ ರದ್ದು-ಬೆಂಗಳೂರು ಪೊಲೀಸರ ಆದೇಶ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಮತ್ತೊಂದು ಮಾದರಿ ನಿರ್ದೇಶವನ್ನು ಜಾರಿಗೆ ತರಲು ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆಗೆ ಬ್ರೇಕ್ ಹಾಕಿ ಮಾದರಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಿಎಂ ಆದಿಯಾಗಿ ಸಚಿವರು, ರಾಜಕೀಯ ನಾಯಕರು ರಸ್ತೆಯಲ್ಲಿ ಹೋಗುವಾಗ ಇರುತ್ತಿದ್ದ ಝೀರೋ ಟ್ರಾಫಿಕ್ ವ್ಯವಸ್ಥೆಗೆ ಬ್ರೇಕ್ ಹಾಕಿದ್ದರು.
“ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ನಗರದಲ್ಲಿ ಇದರಿಂದ ತೊಂದರೆ ಉಂಟಾಗುವುದರಿಂದ ತಮಗೆ ಬೆಂಗಳೂರು ನಗರದಲ್ಲಿ ಆ ಸೌಲಭ್ಯ ಬೇಡ” ಎಂದು ಮುಖ್ಯಮಂತ್ರಿ ಹೇಳಿದ್ದ ಬೆನ್ನಲ್ಲೇ ಈ ಆದೇಶ ಜಾರಿಗೆ ತರಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಿಎಂ ಹೇಳಿಕೆ ಬೆನ್ನಲ್ಲೆ ಜಂಟಿ ಆಯುಕ್ತ (ಸಂಚಾರ ವಿಭಾಗ) ಈ ಸಂಬಂಧ ಆದೇಶವನ್ನು ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ಡಿಜಿ, ಐಜಿ ವಿಐಪಿ ವಾಹನಗಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಗೌರವ ವಂದನೆಗೆ ಬ್ರೇಕ್ ಹಾಕಿ ಆದೇಶ ಹೊರಡಿಸಿದ್ದರು.
ಉತ್ತರ ವಿಭಾಗ (ಟ್ರಾಫಿಕ್) ನ ಹಿರಿಯ ಪೊಲೀಸ್ ಅಧಿಕಾರಿ ಸಂಚಾರ ನಿಯಂತ್ರಕ ರೂಮ್ ಗೆ ಹೊಸ ಆದೇಶದ ಬಗ್ಗೆ ಮಾಹಿತಿ ನೀಡಿದ್ದು, ಈಗಿನಿಂದ ಸಿಎಂ ಬೆಂಗಾವಲು ವಾಹನ ಇನ್ನು ಮುಂದೆ ಜಾರಿಯಲ್ಲಿರುವುದಿಲ್ಲ ಎಂದು ತಿಳಿಸಿದೆ