ಉಡುಪಿ: ಹಾಂಗ್ಯೊ ಔಟ್ಲೇಟ್ ಶುಭಾರಂಭ- ಇನ್ನು ಮುಂದೆ ಗ್ರಾಹಕರ ಮನೆ ಬಾಗಿಲಿಗೆ ಐಸ್ ಕ್ರೀಮ್ !

ಉಡುಪಿ ಆ.14 (ಉಡುಪಿ ಟೈಮ್ಸ್ ವರದಿ): ಹಾಂಗ್ಯೊ ಐಸ್ ಕ್ರೀಮ್ ಇದರ ನೂತನ ಔಟ್ಲೇಟ್ ಉಡುಪಿಯ ಶಿರಿಬೀಡುವಿನಲ್ಲಿ ಇಂದು ಶುಭಾರಂಭಗೊಂಡಿದೆ.

ಈ ನೂತನ  ಐಸ್ ಕ್ರೀಮ್ ಔಟ್ಲೇಟ್ ನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು. ಬಳಿಕ ಆಶಿರ್ವಚನ ನೀಡಿ ಸಂಸ್ಥೆಗೆ ಶುಭ ಹಾರೈಸಿದ ಅವರು, ಕೋವಿಡ್ ಸಂದರ್ಬದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ಬಹಳ ಕಷ್ಟ. ಇಂತಹ ಸಂದರ್ಬದಲ್ಲಿಯೂ ಕೂಡಾ ಹಾಂಗ್ಯೊ ಐಸ್ ಕ್ರೀಮ್ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನವನ್ನು ಮುಟ್ಟಿಸುವಂತಹ ಕಾರ್ಯ ನಡೆಸುತ್ತಿದೆ. ಹಾಲು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದ್ದರೂ ಕೆಲವರು ಹಾಲನ್ನು ಸೇವಿಸಲೂ ಹಿಂದೇಟು ಹಾಕುತ್ತಾರೆ. ಇದರಿಂದ ಜನರು ಇಷ್ಟ ಪಡುವ ವಿವಿಧ ಬಗೆಯ ಐಸ್‍ಕ್ರೀಮ್‍ನೊಂದಿಗೆ ನೀಡುವ ಕಾರ್ಯಮಾಡುತ್ತಿದ್ದಾರೆ. ಇವರ ಈ ಸೇವೆಯು ಇನ್ನಷ್ಟು ವೃದ್ಧಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಹಾಂಗ್ಯೊ ಐಸ್ ಕ್ರೀಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ ಅವರು ಮಾತನಾಡಿ, 1995ರಲ್ಲಿ ಉಡುಪಿಯ ಹೇರೂರಿನಲ್ಲಿ ಹಾಲಿನ ಉದ್ಯಮ ಆರಂಭಿಸಿ ಬಳಿಕ 2003 ರಲ್ಲಿ ಹ್ಯಾಂಗ್ಯೊ ಐಸ್ ಕ್ರೀಮ್ ಸಂಸ್ಥೆ ಆರಂಭ ಗೊಂಡಿತ್ತು. ಸದ್ಯ ಸಂಸ್ಥೆ ದೇಶದ 8ರಾಜ್ಯಗಳಲ್ಲಿ ಐಸ್’ಕ್ರೀಮ್ ವ್ಯವಹಾರ ನಡೆಯುತ್ತಿದೆ.ಕೋವಿಡ್’ನಿಂದ ಎಲ್ಲರಿಗೂ ಸೇವೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ಹುಬ್ಬಳ್ಳಿ, ಪುಣೆಯಲ್ಲಿ ಆನ್ಲೈನ್ ಸೇವಾ ವ್ಯವಸ್ಥೆಯನ್ನು ಮಾಡಲಾಗಿತ್ತು ಅದರಂತೆ ಉಡುಪಿ ಮಣಿಪಾಲದ ಜನತೆಗೆ ಆನ್ಲೈನ್ ಸೇವೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ನೂತನ ಔಟ್ಲೇಟ್ ನ್ನು ಆರಂಭಿಸಲಾಗಿದೆ. ಈ ಮೂಲಕ ಉಡುಪಿ ಮಣಿಪಾಲದ ಬಾಗದ ಜನರಿಗೆ ಆನ್ಲೈನ್ ಮೂಲಕ ಮನೆ ಬಾಗಿಲಿಗೆ ಸೇವೆ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಜಗದೀಶ್ ಪೈ ಅವರು ಮಾತನಾಡಿ, ಉತ್ಕ್ರಷ್ಟ ಗುಣಮಟ್ಟದ, ಜನರ ಅಭಿರುಚಿಗೆ ತಕ್ಕಂತಹ ಹೊಸ ಉತ್ಪನ್ನಗಳನ್ನು ಜನರಿಗೆ ನೀಡಲು ಸಂಸ್ಥೆ ಇನ್ನಷ್ಟು ಮುಂದಡಿ ಇಡುತ್ತದೆ. ಉಡುಪಿ ಮಣಿಪಾಲ ಕೇಂದ್ರೀಕೃತವಾಗಿ ಡೀಲರ್‍ಗಳಿಗೆ ಹ್ಯಾಂಗ್ಯೋ ಉತ್ಪನ್ನ ಒದಗಿಸಲು ಈ ಔಟ್ಲೇಟ್ ಸಹಕಾರಿಯಾಗಲಿದೆ.

ನೂತನವಾಗಿ ಶುಭಾರಂಭಗೊಂಡಿರುವ ಹ್ಯಾಂಗ್ಯೊ ಔಟ್ಲೇಟ್ ನಲ್ಲಿ ಇಲ್ಲಿ  ಆನ್ಲೈನ್ ಮತ್ತು ಆಫ್ಲೈನ್ ಸೇವೆಗಳು ಲಭ್ಯವಿದ್ದು, shop.hangyo.in ನಲ್ಲಿ ಲಾಗ್ ಇನ್ ಆಗಿ ನಿಮ್ಮಿಷ್ಟದ ಹಾಂಗ್ಯೊ ಐಸ್ ಕ್ರೀಮ್ ನ್ನು ಆರ್ಡರ್ ಮಾಡಿ ಪಡೆಯಬಹುದು. ಉಡುಪಿ ಮಣಿಪಾಲದಲ್ಲಿ 6 ಕಿಮಿ ವ್ಯಾಪ್ತಿಗೆ ಹೋಂ ಡೆಲಿವರಿ ಸೇವೆ ಕೂಡಾ ನೀಡಲಾಗುತ್ತದೆ.

ನೂತನ  ಔಟ್ಲೇಟ್ ನ ಶುಭಾರಂಭದ ಸಲುವಾಗಿ 500 ರೂ ಗಿಂತ ಹೆಚ್ಚಿನ ಐಸ್ ಕ್ರೀಮ್ ಖರೀರಿಸಿದ ಮೊದಲ ನೂರು ಗ್ರಾಹಕರಿಗೆ ತಮ್ಮ ಖರೀದಿಯ ಮೇಲೆ 100 ರೂ ಗಳ ಕಡಿತವನ್ನು ನೀಡಲಾಗುತ್ತಿದೆ. ಈ ಆಫರ್ ನ್ನು ತಮ್ಮದಾಗಿಸಲು ಗ್ರಾಹಕರು LAUNCH100 ಎಂಬ ಕೂಪನ್ ಕೋಡ್ ಬಳಸಿ ಪಡೆಯಬಹುದಾಗಿದೆ.

ಇಲ್ಲಿ ಕಾಫಿ, ಕೇಸರ್ ಬಾದಾಮ್ ಹಾಗೂ ವೆನಿಲಾ ಫ್ಲೇವರ್ ನ ಸಕ್ಕರೆ ರಹಿತ ಸಿಹಿಯಾದ ಐಸ್ ಕ್ರೀಮ್ ಸವಿಯಬಹುದಾಗಿದೆ. ಪಾರ್ಟಿ ಪ್ಯಾಕ್ ,ಫ್ಯಾಮಿಲಿ ಫ್ಯಾಕ್ ಐಸ್ ಕ್ರೀಮ್ ಗಳು ಆಕರ್ಷಕ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಡೈರಿ ಉತ್ಪನ್ನಗಳೂ ಇಲ್ಲಿ ದೊರೆಯುತ್ತದೆ.

ಈ ಸಂದರ್ಭ ಹಾಂಗ್ಯೊ ಐಸ್ ಕ್ರೀಮ್ ಸಂಸ್ಥೆಯ ನಿರ್ದೇಶಕರಾದ ದೀಪಾ ಪೈ, ಶ್ರೀನಿವಾಸ ಪೈ, ಮೇಘ ಪೈ, ವ್ಯವಸ್ಥಾಪಕ ರಾಕೇಶ್ ಕಾಮತ್, ಕಮಲಾಕ್ಷ ಪೈ, ಹರೀಶ್ ಪ್ರಭು, ಸುರೇಶ್ ಪೈ, ಮನೋಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9845222777 ಸಂಪರ್ಕಿಸುವಂತೆ ಹಾಂಗ್ಯೊ ಐಸ್ ಕ್ರೀಮ್ ಸಂಸ್ಥೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

error: Content is protected !!