| ಹೊಸದಿಲ್ಲಿ ಆ.14 : ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಗೆ 2022 ರ ಜು.1 ರಿಂದ ನಿಷೇಧ ಬೀಳಲಿದೆ.
ಈ ಬಗ್ಗೆ ಕೇಂದ್ರ ಸರಕಾರ ಘೋಷಣೆ ಮಾಡಿದ್ದು, ಒಮ್ಮೆ ಬಳಕೆ ಮಾಡಿ ಎಸೆಯುವಂತಹ ಪ್ಲಾಸ್ಟಿಕ್ ಲೋಟ, ತಟ್ಟೆ, ಸ್ಟ್ರಾ ಇತ್ಯಾದಿಗಳನ್ನು ನಿಷೇಧ ಮಾಡಲಾಗುತ್ತದೆ.
ಅದರಂತೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ಹಿಡಿ ಇರುವ ಇಯರ್ ಬಡ್, ಬಲೂನುಗಳ ಪ್ಲಾಸ್ಟಿಕ್ ಹಿಡಿಕೆ, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್‌ಕ್ರೀಂ ಸ್ಟಿಕ್, ಅಲಂಕಾರ ಕ್ಕಾಗಿ ಥರ್ಮೊಕೋಲ್, ಪ್ಲಾಸ್ಟಿಕ್‌ನ ತಟ್ಟೆ, ಕಪ್, ಲೋಟ, ಫೋರ್ಕ್, ಚಮಚೆ, ಚೂರಿಯಂತಹ ಕಟ್ಲೆರಿ ವಸ್ತುಗಳು, ಸಿಹಿ ತಿಂಡಿ, ಆಮಂತ್ರಣ ಪತ್ರ, ಸಿಗರೇಟು ಪ್ಯಾಕ್‌ನಂತವಕ್ಕೆ ಪ್ಲಾಸ್ಟಿಕ್ ಹೊದಿಕೆ, 100 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು, ಕಲಕುವ ಹಿಡಿಗಳು ಇತ್ಯಾದಿ ನಿಷೇಧವಾಗಲಿದೆ.
ಅಲ್ಲದೆ ಪ್ಲಾಸ್ಟಿಕ್ ಚೀಲಗಳ ದಪ್ಪವನ್ನು 50 ಮೈಕ್ರಾನ್‌ಗಳಿಂದ 120 ಮೈಕ್ರಾನ್‌ಗಳಿಗೆ ಏರಿಸಲು ಸರಕಾರ ನಿರ್ಧರಿಸಿದೆ. ಇದು 2 ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲನೇ ಹಂತದಲ್ಲಿ ಪ್ರಸಕ್ತ ವರ್ಷದ ಸೆ. 30ರ ಬಳಿಕ 75 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಚೀಲಗಳಿಗೆ ನಿಷೇಧ ವಿಧಿಸಲಾಗುತ್ತದೆ. 2022ರ ಡಿ. 31ರ ಬಳಿಕ 120 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಬ್ಯಾಗ್‌ಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ.
| |