ಉಡುಪಿ ಇಶ್ನಾ ಪ್ಲೇ ಸ್ಕೂಲ್: ಆ.15 ರಂದು ಮಕ್ಕಳಿಗಾಗಿ “ಸ್ಪೋರ್ಟ್ಸ್ ಫಾರ್ ಆಲ್” ವಿನೂತನ ಕಾರ್ಯಕ್ರಮ
ಉಡುಪಿ ಆ.13(ಉಡುಪಿ ಟೈಮ್ಸ್ ವರದಿ): ಇಶ್ನಾ ಪ್ಲೇ ಸ್ಕೂಲ್ ವತಿಯಿಂದ ಮಕ್ಕಳಿಗಾಗಿ “ಸ್ಪೋರ್ಟ್ಸ್ ಫಾರ್ ಆಲ್” ಎಂಬ ವಿನೂತನ ಆನ್ಲೈನ್ ಕಾರ್ಯಕ್ರಮವನ್ನು ಆ.15 ರಂದು ಆಯೋಜಿಸಲಾಗಿದೆ.
ಈ ವಿನೂತನ ಕಾರ್ಯಕ್ರಮವು ಆ.15 ರ ಸಂಜೆ.4.30 ರಿಂದ 6 ಗಂಟೆವರೆಗೆ ನಡೆಯಲಿದ್ದು, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ನ ಅಧ್ಯಕ್ಷ ಡಾ. ಕೆಂಪರಾಜ ಎಚ್.ಬಿ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮವು 12 ಮತ್ತು ಅದಕ್ಕಿಂತ ಕಡಿಮೆ ವರ್ಷದೊಳಗಿನ ಮಕ್ಕಳಿಗೆ ನಡೆಯುತ್ತಿದ್ದು, ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಯಾವ ರೀತಿಯ ಆಹಾರ ಕ್ರಮ ರೂಢಿಸಿಕೊಳ್ಳಬೇಕು, ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬವವರು ಎಲ್ಲಿಯೆಲ್ಲಾ ಕೋಚಿಂಗ್ ಪಡೆಯಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ.
ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಇಚ್ಚಿಸುವವರು 999 ರೂ ನೀಡಿ ನೋಂದಾಯಿಸಿಕೊಳ್ಳಬೇಕಾಗಿದೆ. ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಶುಲ್ಕ ಪಾವತಿಗಾಗಿ ಕರೆ ಮಾಡಬಹುದು ಅಥವಾ https://imjo.in/uAmgag ಲಿಂಕ್ ಬಳಸಿಯೂ ಶುಲ್ಕ ಪಾವತಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9741209805ನ್ನು ಸಂಪರ್ಕಿಸ ಬಹುದಾಗಿದೆ ಎಂದು ಇಶ್ನಾ ಪ್ಲೇ ಸ್ಕೂಲ್ ಪ್ರಕಟಣೆ ತಿಳಿಸಿದೆ. ಇನ್ನು ಈ ಕಾರ್ಯಕ್ರಮ ನಡೆಸಿಕೊಡುವ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ನ ಅಧ್ಯಕ್ಷ ಡಾ. ಕೆಂಪರಾಜ ಎಚ್.ಬಿ ಅವರು, ಈ ಕ್ಷೇತ್ರದಲ್ಲಿ 35 ವರ್ಷಗಳ ಅನುಭವ ಹೊಂದಿದ್ದು, ರಾಷ್ಟ್ರೀಯ, ರಾಜ್ಯ ಹಾಗೂ ವಿವಿ ವಲಯದ ಅಥ್ಲೆಟಿಕ್’ಗಳಿಗೆ ತರಬೇತಿ ನೀಡಿರುತ್ತಾರೆ. ಮಾತ್ರವಲ್ಲದೆ ಈ ವರೆಗೆ 1 ಲಕ್ಷ ಮಕ್ಕಳಿಗೆ ತರಬೇತಿ ನೀಡಿ ಹೆಸರು ಗಳಿಸಿರುತ್ತಾರೆ.