ಉಡುಪಿ: ಆ.15 ರಂದು ಚಿನ್ನಾಭರಣ ಮಾಪನದ ‘ಅಸೈಯಿಂಗ್ & ಹಾಲ್ ಮಾರ್ಕಿಂಗ್’ ಕೇಂದ್ರ ಉದ್ಘಾಟನೆ
ಉಡುಪಿ ಆ.13( ಉಡುಪಿ ಟೈಮ್ಸ್ ವರದಿ): ಭಾರತೀಯ ಮಾನದಂಡಗಳ ಮಾಪನ ಸಂಸ್ಥೆಯ ಪರವಾನಿಗೆ ಪಡೆದ ಚಿನ್ನಾಭರಣಗಳ ಗುಣಮಟ್ಟದ ಮಾಪನ ಕೇಂದ್ರ “ಅಸೈಯಿಂಗ್ ಆ್ಯಂಡ್ ಹಾಲ್ ಮಾರ್ಕಿಂಗ್” ಸಂಸ್ಥೆಯ ಉದ್ಘಾಟನಾ ಸಮಾರಂಭ ಆ.15 ರಂದು ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಮಣಿಪಾಲ್ ಸೆಂಟರ್ ನಲ್ಲಿ ನಡೆಯಲಿದೆ.
ಸಂಸ್ಥೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಅವರು ಆ.15 ರ ಮಧ್ಯಾಹ್ನ 12 ಗಂಟೆಗೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಬ್ಯಾಂಕ್ ಆಫ್ ಬರೋಡಾದ ಹಿರಿಯ ವ್ಯವಸ್ಥಾಪಕ ಚರಣ್ ರಾಜ್, ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಫೆಡರೇಶನ್ ನ ಅಧ್ಯಕ್ಷ ಜಯ ಆಚಾರ್ಯ, ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ನಾಗರಾಜ ಆಚಾರ್ಯ, ಉಡುಪಿ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆರ್.ಆಚಾರ್ಯ ಉಪಸ್ಥಿತರಿರಲಿದ್ದಾರೆ.
ಸಮಾರಂಭದ ಸಭಾ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಉಡುಪಿಯ ಸ್ವದೇಶಿ ಹೆರಿಟೇಜ್ ಹೋಟೆಲ್ ನ ಸ್ವರ್ಗ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಹಾಗೂ ಪ್ರದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.