ಶುಭಕೋರುವ ವರ್ಡಿಂಗ್ಸ್, ಫ್ಲೆಕ್ಸ್ ಹಾಕುವುದನ್ನು ನಿಲ್ಲಿಸಿ -ಸಿಎಂ ಬಸವರಾಜ ಬೊಮ್ಮಾಯಿ
ಉಡುಪಿ ಆ.12 (ಉಡುಪಿ ಟೈಮ್ಸ್ ವರದಿ): ಕೆಲವು ದಿನಗಳ ಹಿಂದೆ ಸರಕಾರಿ ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ಇತರ ನೆನಪಿನ ಕಾಣಿಕೆ ನೀಡುವುದನ್ನು ನಿಷೇಧಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಶುಭಕೋರುವಂತಹ ವರ್ಡಿಂಗ್ಸ್, ಫ್ಲೆಕ್ಸ್ ಗಳನ್ನು ಹಾಕುವುದನ್ನು ನಿಲ್ಲಿಸಬೇಕು ಎಂದರು. ಜೊತೆಗೆ ಫ್ಲೆಕ್ಸ್ ಗಳನ್ನು ಹಾಕದಂತೆ ಪಕ್ಷ ಮತ್ತು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡರು. ಸರಕಾರಿ ಸಮಾರಂಭಗಳಲ್ಲಿ ಹೂವಿನ ಬಳಕೆ ನಿಷೇಧ ಮಾಡಿರುವುದನ್ನು ವಿರೋಧಿಸಿ ಹೂವಿನ ವ್ಯಾಪ್ಯಾರಿಗಳು ಕೈಗೊಂಡಿದ್ದ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡುವ ಇಚ್ಚೆ ನಮಗಿಲ್ಲ.
ಸರಕಾರಿ ಕಾರ್ಯಕ್ರಮಗಳಲ್ಲಿ ಹೂವು, ಹೂವಿನ ಗುಚ್ಚಗಳನ್ನು ಬಳಕೆಮಾಡುವುದನ್ನು ನಿಷೇಧಿಸಲಾಗಿದೆಯೇ ಹೊರತು ಖಾಸಗಿ ಕಾರ್ಯಕ್ರಮಗಳಲ್ಲಿ ಅಲ್ಲ. ಹೂವಿನ ವ್ಯಾಪಾರಿ ಗಳು ಖಾಸಗಿ ಕಾರ್ಯಕ್ರಮ ಗಳಿಗೆ ಹೂವಿನ ಬಳಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು. ಕೋವಿಡ್ ಸೋಂಕಿನಿಂದ ಒಂದು ಲಕ್ಷಗಳಷ್ಟು ಮಂದಿ ಸಾವನ್ನಪ್ಪಿದ್ದರೂ ಸರಕಾರ ಇದನ್ನು ಮುಚ್ಚಿ ಇಟ್ಟಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮಾಧ್ಯಮ ದವರು ಕೇಳಿದ ಪ್ರಶ್ನೆ ಗೆ ಪ್ರತಿಕ್ರಿಯೆ ನೀಡಿದ ಅವರು ಇದು ಆಧಾರ ತಹಿತವಾದ ಹೇಳಿಕೆರಾಜ್ಯದ ಜಿಲ್ಲೆಗಳಲ್ಲಿ ಎಲ್ಲಾ ಬಗೆಯ ದಾಖಲೆಗಳಿವೆ. ಅವರ ಹೇಳಿಕೆಗೆ ಕುರಿತಾಗಿ ಆಧಾರ ಇದ್ದರೆ ನೀಡಲಿ ಈ ಬಗ್ಗೆ ಪರಿಶೀಲನೆ ನಡೆಸುವ ಎಂದು ಹೇಳಿದರು.
ಪೊಲೀಸ್ ಗೌರವಾರ್ಪಣೆಗಳ ಕಾರ್ಯಕ್ರಮಗಳನ್ನು ಖಾಸಗಿ ಜಾಗದಲ್ಲಿ ನಡೆಸುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದ ಅವರು, ಗೌರವಾರ್ಪಣೆಯನ್ನು ಪ್ರತೀ ಬಾರೀ ನಡೆಸುವ ಅಗತ್ಯವಿಲ್ಲ. ಇವುಗಳನ್ನು ವಿಶೇಷ ಪೊಲೀಸ್ ಸಮಾರಂಭದ ಸಂದರ್ಭದಲ್ಲಿ ಮಾತ್ರ ನಡೆಸುವಂತಾಗಬೇಕು. ಈ ಬಗ್ಗೆ ತಕ್ಷಣ ಆದೇಶ ನೀಡುವುದಾಗಿ ತಿಳಿದರು. ಮುಖ್ಯಮಂತ್ರಿ ಆದರೂ ನಾಡಿನ ಸೇವಕ ಎಂಬ ಭಾವನೆ ಕಡಿಮೆ ಆಗಬಾರದು ಎಂದರು.