ಉಡುಪಿ: ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯಿಂದ ಗಾಲಿ ಕುರ್ಚಿ ಕೊಡುಗೆ

ಉಡುಪಿ,ಆ.12;  ರೈಲು ಅಪಘಾತದಿಂದ, ಎರಡು ಕಾಲುಗಳನ್ನು ಕಳೆದುಕೊಂಡು, ಅಸಹಾಯಕ ಪರಿಸ್ಥಿತಿಯಲ್ಲಿದ್ದ, ಬಾಬೀ ರಾಮ್ ಬಾಬು ಅವರಿಗೆ, ಉಡುಪಿಯ ಗಿರಿಜಾ ಹೆಲ್ತ್ ಕೇರ್ ಎಂಡ್ ಸರ್ಜಿಕಲ್ಸ್ ಸಂಸ್ಥೆ ಗಾಲಿ ಕುರ್ಚಿಯನ್ನು ಉಚಿತವಾಗಿ ಒದಗಿಸಿ ಮಾನವೀಯತೆ ಮೆರೆದರು.

ಫಲಾನುಭವಿ ಬಾಬೀ ಅವರು ಉದ್ಯಾವರ ಕಟ್ಟೆಗುಡ್ಡೆಯ ವಸತಿ ಸಂಕೀರ್ಣದಲ್ಲಿ ಸೆಕ್ಯೂರ್ಟಿ ಗಾರ್ಡಾಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅಸಹಾಯಕತೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಲ್ಲಿ ನೆರವು ಯಾಚಿಸಿದ್ದರು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಮನವಿ ಮಾಡಿದಾಕ್ಷಣ ಸಂಸ್ಥೆಯವರು ಸ್ಪಂದಿಸಿ ಉಚಿತವಾಗಿ ಗಾಲಿ ಕುರ್ಚಿ ನೀಡಲು ಒಪ್ಪಿದ್ದರು.

ವಿತರಿಸುವ  ಸಂದರ್ಭದಲ್ಲಿ ಸಂಸ್ಥೆಯ ಮಾಲಿಕ ರವೀಂದ್ರ ಶೆಟ್ಟಿ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಮೇಶ್ ಕಿದಿಯೂರ್, ತಾರಾನಾಥ್ ಮೇಸ್ತ ಶಿರೂರು ಅವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!