ದ.ಕ.: ತೊಕ್ಕೊಟ್ಟುವಿನ 52 ವರ್ಷದ ವ್ಯಕ್ತಿ ಬಲಿ, 23 ಕ್ಕೇರಿದ ಸಾವಿನ ಸಂಖ್ಯೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ತೀವ್ರ ಗತಿಯ ಏರಿಕೆಯ ನಡುವೆ ಸೋಮವಾರ ಮತ್ತೊಂದು ಬಲಿಯಾಗಿದೆ. ತೊಕ್ಕೊಟ್ಟು, ಸಂತೋಷ್ ನಗರದ 52 ವರ್ಷದ ವ್ಯಕ್ತಿ ಮಹಾಮಾರಿಗೆ ಕೊನೆಯುಸಿರುಳೆದಿದ್ದರೆ . ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಮತ್ತೊಂದು ಆತಂಕದ ವಿಚಾರ ಎಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ಮಂದಿ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ.