ಉಡುಪಿ: ಆ.15 ರಂದು ಫ್ರಾ ಆಲ್ಫ್ರೆಡ್ ರೋಚ್ ಧರ್ಮಪ್ರಾಂತ್ಯದ ಪ್ರಥಮ ದೇವರ ಸೇವಕ ಘೋಷಣೆ

ಉಡುಪಿ, ಆ11 : ಕರ್ನಾಟಕದ ಕ್ರಿಶ್ಚಿಯನ್ನರಿಗೆ ಮತ್ತು ವಿಶೇಷವಾಗಿ ಉಡುಪಿ ಧರ್ಮಪ್ರಾಂತ್ಯಕ್ಕೆ ಹೆಮ್ಮೆಯ ಕ್ಷಣ. ಪವಿತ್ರ ಪಾದ್ರಿ ಫ್ರಾ ಆಲ್ಫ್ರೆಡ್ ರೋಚ್ ಒಎಫ್‌ಎಮ್ ಕ್ಯಾಪ್  (OFM Cap) (ಬ್ಯಾಪ್ಟಿಸಮ್ ನ ಹೆಸರು ಪೀಟರ್ ಜಾನ್ ರೋಚ್), ‘ಅಮ್ಚೋ ಪಾದ್ರ್ಯಬ್’ ಎಂದು ಕರೆಯುತ್ತಾರೆ. ಇವರು ಹೊಸದಾಗಿ ರಚನೆಯಾದ ಉಡುಪಿ ಧರ್ಮಪ್ರಾಂತ್ಯದ ದೇವರ ಸೇವಕರಾಗಿ ಘೋಷಿಸಲ್ಪಡುವ ಮೊದಲ ವ್ಯಕ್ತಿಯಾಗಲಿದ್ದಾರೆ.ಇಲ್ಲಿನ ಹೋಲಿ ಫ್ಯಾ. ಚರ್ಚ್ ಬ್ರಹ್ಮಾವರದಲ್ಲಿ ಆ.15 ರ ಭಾನುವಾರ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಅತಿವಂದನೀಯ ಜೆರಾಲ್ಡ್ ಐಸಾಕ್ ಲೋಬೋ ಅವರು ಬೆಳಿಗ್ಗೆ 8 ಗಂಟೆಗೆ ಅರ್ಪಿಸಲಿರುವ ಸಂಭ್ರಮದ ಬಲಿಪೂಜೆಯಲ್ಲಿ ಅವರನ್ನು ದೇವರ ಸೇವಕನಾಗಿ ಘೋಷಿಸಲಿದ್ದಾರೆ.

ಹೋಲಿ ಫ್ಯಾಮಿಲಿ ಚರ್ಚ್‌ನ ಮೊದಲ ಕಾಪುಚಿನ್ ಧರ್ಮಗುರುಗಳಾಗಿದ್ದ ಫ್ರಾ ಆಲ್ಫ್ರೆಡ್ ರೋಚ್ ಅವರನ್ನು ಹೋಲಿ ಫ್ಯಾಮಿಲಿ ಚರ್ಚ್‌ನ ಸ್ಮಶಾನದಲ್ಲಿಯೇ ಹೂಳಲಾಗಿತ್ತು. ದೇವರ ಸೇವಕ ಎಂಬ ಘೋಷಣೆಯು ಕ್ರೈಸ್ತ ಧರ್ಮದಲ್ಲಿ ಓರ್ವ ವ್ಯಕ್ತಿಯನ್ನು ‘ಸಂತ’ ಎಂದು ಘೋಷಿಸುವ ಮೊದಲ ಹೆಜ್ಜೆಯಾಗಿದೆ.

ಫ್ರೊ ಆಲ್ಫ್ರೆಡ್ ರೋಚ್ ಅವರು  ಪೀಟರ್ ಜಾನ್ ರೋಚ್ ಆಗಿ ಮೂಡುಹಡುವಿನಲ್ಲಿ ಸೇಂಟ್ ಪೀಟರ್ಸ್ ಚರ್ಚ್ ಬಾರ್ಕುರು ಇಲ್ಲಿಎಪ್ರಿಲ್ 3, 1924 ರಂದು ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಣವನ್ನು ಮೂಡಹಡು, ಸಾಸ್ತಾನ ಮತ್ತು ಮಿಲಾಗ್ರಿಸ್ ಕಲ್ಯಾಣಪುರದಲ್ಲಿ ಪೂರ್ಣಗೊಳಿಸಿದ ನಂತರ, ಅವರು 1944 ರಲ್ಲಿ ಕಾಪುಚಿನ್ಸ್  ಸಭೆಯನ್ನು ಸೇರಿದರು. ಇಲ್ಲಿ ತಮ್ಮ ಹೆಸರನ್ನುಅವರು ಆಲ್ಫ್ರೆಡ್ ಎಂದು ಬದಲಾಯಿಸಿಕೊಂಡರು. ಏಪ್ರಿಲ್ 11, 1951 ರಂದು ಅವರಿಗೆ ಕೋಟಗಿರಿಯಲ್ಲಿ ಯಾಜಕೀ ದೀಕ್ಷೆ ಲಭಿಸಿತು.ಮಾಂಟೆ ಮರಿಯಾನೊ ಫರಂಗಿಪೇಟೆಯಲ್ಲಿ ತನ್ನ ಆರಂಭಿಕ ಪೌರೋಹಿತ್ಯ ದಿನಗಳನ್ನು ನವಶಿಷ್ಯರಾಗಿಕಳೆದ ನಂತರ, ಫ್ರಾ ಆಲ್ಫ್ರೆಡ್ 1956 ರಲ್ಲಿ ಬ್ರಹ್ಮಾವರದ ಹೊಲಿ ಫ್ಯಾಮಿಲಿ ಚರ್ಚ್‌ನ ಮೊದಲ ಕಾಪುಚಿನ್ ಪಾದ್ರಿ ಆಗಿ ಅಧಿಕಾರ ವಹಿಸಿ ಕೊಂಡರು. ಈ ಸಂಧರ್ಭದಲ್ಲಿ ಬ್ರಹ್ಮಾವರ ಇಗರ್ಜಿಯಧರ್ಮಪ್ರಜೆಗಳಲ್ಲಿ  ಬಡತನ, ಅನಕ್ಷರತೆ, ಆಧ್ಯಾತ್ಮಿಕತೆಯ ಕೊರತೆ ಇದ್ದಿತು. ಆದರೆ ಫಾದರ್ ಆಲ್ಫ್ರೆಡ್ ಅವರ ಆಗಮನವು ಬ್ರಹ್ಮಾವರದಲ್ಲಿ ಹೊಸ ಆಧ್ಯಾತ್ಮಿಕ,ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಅಂತರ್-ನಂಬಿಕೆಯ ಯುಗಕ್ಕೆ ನಾಂದಿ ಹಾಡಿತು. ಇಂದು ಆಲ್‌ಫ್ರೆಡ್ ರೋಚ್ ಅವರು ಹೋಲಿ ಫ್ಯಾ. ಚರ್ಚ್ ಬ್ರಹ್ಮಾವರದ ಪ್ರತಿಯೊಬ್ಬ ಧರ್ಮಪ್ರಜೆಗಳ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಏಕೆಂದರೆ ಅವರು ಅಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತಿದ್ದ ಸಂಧರ್ಭದಲ್ಲಿ ಯುವಕರು ಮತ್ತು ಹಿರಿಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರು ನಿವೃತ್ತಿಯ ನಂತರ 90 ರ ದಶಕದ ಮಧ್ಯದಲ್ಲಿ ಮತ್ತೆ ಬ್ರಹ್ಮಾವರಕ್ಕೆ ಬಂದರು ಮತ್ತು ಡಿ. 31, 1996 ರಂದು ಅವರ ಮರಣದ ನಂತರ ಅವರನ್ನು ಇಲ್ಲಿಯೇ ಸಮಾಧಿ ಮಾಡಲಾಯಿತು.

ಹೋಲಿ ಫ್ಯಾಮಿಲಿ ಚರ್ಚ್‌ ಬ್ರಹ್ಮಾವರದ ನಂತರ  ಫಾದರ್ ಆಲ್‌ಫ್ರೆಡ್ ದೇವರ ವಾಕ್ಯವನ್ನು ಬೋಧಿಸುತ್ತಾ ಕಾರವಾರ ಧರ್ಮ ಕ್ಷೇತ್ರದ ಬಿನಗಾ ಮತ್ತು ಲೋವರ್ ಕಾಸರಕೋಡುವಿನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. ಈ ಬಾಗದಲ್ಲಿ ಈಗಾಗಲೇ ಅವರನ್ನು ಜನರು ಸಂತರೆಂದು ಪರಿಗಣಿಸುತ್ತಾರೆ. ಫಾದರ್ ಆಲ್ಪ್ರೆಡ್ ರೋಚ್ ನಿಧನರಾದ ಸಂಧರ್ಭದಲ್ಲಿ

ಕಾರವಾರ ಧರ್ಮಪ್ರಾಂತ್ಯದ ಸಾವಿರಾರು ಜನರು ಬಸ್, ವ್ಯಾನ್‌,ಮತ್ತು  ಕಾರುಗಳಲ್ಲಿ ಬಂದು  ಅವರ ‘ಸಾಂತ್‌ ಪಾದ್ರ್ಯಬ್’ ನ ಅಂತಿ
ಮ ದರ್ಶನವನ್ನು ಪಡೆದಿದ್ದರು ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಅವರು ಬೋಧನೆ  ಮತ್ತು ಆಧ್ಯಾತ್ಮಿಕ ಕೆಲಸದ
ಹೊರತಾಗಿ  ಬಡವರಿಗೆ ಆಹಾರ, ಮನೆ, ಶಿಕ್ಷಣ, ಉದ್ಯೋಗಗಳನ್ನು ಒದಗಿಸಿದರು, ಬಡ ಜನರ ಮದುವೆಗೆ ಸಹಾಯ ಮಾಡಿದರು, 
ನೂರಾರು ಜನರು ಧಾರ್ಮಿಕ ಜೀವನಕ್ಕೆ ಸೇರಲು ಅವರು ಪ್ರೇರೇಣೆಯಾಗಿದ್ದರು.  ಅವರೊಬ್ಬ ನಾಮಾಂಕಿತ ಬೋಧಕರಾಗಿದ್ದರು
ಮತ್ತು ಅವರ ಬೋಧನೆಗಳನ್ನು ಕೇಳಲು ನೂರಾರು ಜನರು ದೂರದೂರಿನಿಂದ ಆಗಮಿಸುತಿದ್ದರು.

ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರು ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಫಾದರ್ ಆಲ್ಫ್ರೆಡ್ ರೋಚ್ ಅವರನ್ನು ದೇವರ ಸೇವಕರಾಗಿ ಘೋಷಿಸಿದಂತೆ, ಉಡುಪಿ ಧರ್ಮಪ್ರಾಂತ್ಯದಿಂದ ಈ ವಿಶಿಷ್ಟ ಗೌರವಕ್ಕೆ ಏರಿದ ಮೊದಲ ವ್ಯಕ್ತಿಯಾಗಿ ಅವರು ಪಾತ್ರರಾಗುತ್ತಾರೆ. ಮಂಗಳೂರು ಡಯಾಸಿಸ್‌ನ ಮಾಜಿ ವಿಕಾರ್ ಜನರಲ್ ಮತ್ತು ಬೆಥನಿಯ ಲಿಟರ್ ಫ್ಲವರ್ ಸಹೋದರಿಯ ಸಭೆಯ ಸ್ಥಾಪಕರಾದ ಮೊನ್ಸಿಂಜರ್ ರೇಮಂಡ್ ಫ್ರಾನ್ಸಿಸ್ ಕ್ಯಾಮಿಲ್ಲಸ್ ಮಸ್ಕರೇನ್ಹಸ್, ಅವರ ಬಳಿಕ ಈ ಗೌರವಕ್ಕೆ ಪಾತ್ರರಾದಕರ್ನಾಟಕ ಮೂಲದ ಎರಡನೇ ವ್ಯಕ್ತಿ ಫಾದರ್ ಆಲ್ಪ್ರೆಡ್ ರೋಚ್. ಮೊನ್ಸಿಂಜರ್ರೇಮಂಡ್ ಫ್ರಾನ್ಸಿಸ್ ಕ್ಯಾಮಿಲ್ಲಸ್ ಮಸ್ಕರೇನ್ಹಸ್  ಅವರನ್ನು 2008 ರಲ್ಲಿ ದೇವರ ಸೇವಕನೆಂದು ಘೋಷಿಸಲಾಗಿತ್ತು. ಉಡುಪಿ ಧರ್ಮಪ್ರಾಂತ್ಯ ಸ್ಥಾಪನೆಯಾದ ಅತಿ ಅಲ್ಪ ಅವಧಿಯಲ್ಲಿ ಇಂತಹ ಗೌರವ ಪಾತ್ರವಾಗಿರುವುದು ಧರ್ಮಪ್ರಾಂತ್ಯದ ಮತ್ತೊಂದು ವಿಶಿಷ್ಟತೆಯಾಗಿದೆ. ಈ ಮೊದಲುಧರ್ಮಪ್ರಾಂತ್ಯದ ಜನಪ್ರಿಯ ಯಾತ್ರಾ ಕೇಂದ್ರವಾದ ಅತ್ತೂರು ಕಾರ್ಕಳದ ಸೇಂಟ್ ಲಾರೆನ್ಸ್ ಚರ್ಚ್ ಅನ್ನು, 2016 ರಲ್ಲಿ ಮೈನರ್ ಬೆಸಿಲಿಕಾ ಎಂದು ಘೋಷಿಸಲಾಯಿತು. ಈಗ ಧರ್ಮಪ್ರಾಂತ್ಯತನ್ನ ಮೊದಲ ದೇವರ ಸೇವಕರನ್ನು ಫ್ರಾ ಆಲ್ಫ್ರೆಡ್ ರೋಚ್ ರೂಪದಲ್ಲಿ ಪಡೆಯಲಿದೆ.

Leave a Reply

Your email address will not be published. Required fields are marked *

error: Content is protected !!