ಉಡುಪಿ: ಆರ್ಟ್ & ಆರ್ಟಿಕಲ್ಸ್ ಪುಸ್ತಕ ಅನಾವರಣ
ಉಡುಪಿ: ಸುನಾಗ್ ಆಸ್ಪತ್ರೆಯ ಆಶ್ರಯದಲ್ಲಿ ಉಡುಪಿಯ ಕಡಿಯಾಳಿಯಲ್ಲಿರುವ ಭರತಾಂಜಲಿ ಸಭಾಂಗಣದಲ್ಲಿ ಸುನವ್ಯ ಹಾಗೂ ಸಂಹಿತ ಇವರ ಆರ್ಟ್ ಅಂಡ್ ಆರ್ಟಿಕಲ್ಸ್ ಎಂಬ ಪುಸ್ತಕ ಆ. 9ರಂದು ಅನಾವರಣಗೊಂಡಿತು.
ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಮನೋವೈದ್ಯ ಡಾ.ಪಿ.ವಿ ಭಂಡಾರಿ, ಡೆಂಟಲ್ ಕೇರ್ ನಿರ್ದೇಶಕ ಡಾ.ವಿಜಯೇಂದ್ರ ವಸಂತ್, ಸುನಾಗ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ನರೇಂದ್ರ ಕುಮಾರ್ ಹಾಗೂ ಡಾ.ವೀಣಾ ನರೇಂದ್ರಕುಮಾರ್ ಉಪಸ್ಥಿತರಿದ್ದರು.