ಸಚಿವ ಈಶ್ವರಪ್ಪನವರ ಮೆದುಳಿನ ಸಮತೋಲನ ತಪ್ಪಿದೆ- ಸೊರಕೆ

ಉಡುಪಿ ಆ.10(ಉಡುಪಿ ಟೈಮ್ಸ್ ವರದಿ): ಸಚಿವ ಕೆಎಸ್ ಈಶ್ವರಪ್ಪನವರಿಗೆ ಮೆದುಳಿನಲ್ಲಿ ಸಮತೋಲನ ತಪ್ಪಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಹೇಳಿದ್ದಾರೆ.

ವಿಧಾನ ಸಭೆಯ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ವಿರುದ್ಧ ಕೆ.ಎಸ್. ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪನವರ ಮೆದುಳಿಗೂ ಮತ್ತು ನಾಲಿಗೆಗೂ ಸಂಬಂಧವಿಲ್ಲ. ಈಶ್ವರಪ್ಪನವರ ಮೆದುಳಿನ ಸಮತೋಲನ ತಪ್ಪಿದೆ. ಆದಷ್ಟು ಬೇಗ ಅವರಿಗೆ ಮಂಪರು ಪರೀಕ್ಷೆ ನಡೆಸಿ. ಆಸ್ಪತ್ರೆಗೆ ದಾಖಲಿಸಬೇಕು ಎಂದು ಈಶ್ವರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪವಿತ್ರವಾದ ವಿಧಾನ ಸೌಧದಲ್ಲಿ ಅನಾಗರಿಕರ ರೀತಿಯಲ್ಲಿ ಏಕಾಏಕಿ ಅವಾಚ್ಯ ಪದಗಳ ಮೂಲಕ ಅವಹೇಳನ ಮಾಡುವಂತಹ ಹೇಳಿಕೆ ನೀಡಿರುವುದು ಅವರ ಸಂಸ್ಕøತಿಯನ್ನು ಬಿಂಬಿಸುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಆಗಬಹುದಾದ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮವನ್ನು ಬಿಜೆಪಿ ಶೀಘ್ರವಾಗಿ ಕೈಗೊಳ್ಳುವುದು ಉತ್ತಮ ಎಂದು ವ್ಯಂಗ್ಯವಾಡಿದರು. 

Leave a Reply

Your email address will not be published. Required fields are marked *

error: Content is protected !!