ಬಿಗ್ ಬಾಸ್ ಸೀಸನ್ 8: ಗ್ರಾಂಡ್ ಫಿನಾಲೆಯ ವಿನ್ನರ್ ಪಟ್ಟ ಮಂಜು ಪಾವಗಡ

ಬೆಂಗಳೂರು ಆ.9 : ವೀಕ್ಷಕರ ಬಹುನಿರೀಕ್ಷಿತ  ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಯ ವಿನ್ನರ್ ಪಟ್ಟ ಮಂಜು ಪಾವಗಡ ಅವರಿಗೆ ಲಭಿಸಿದೆ.

ದೊಡ್ಡ ಮನೆಯಲ್ಲಿ ಆರಂಭದಿಂದಲೂ ಸ್ಪರ್ಧಿಗಳ ಜೊತೆ ಪಂಚಿಂಗ್ ಡೈಲಾಗ್ ಮೂಲಕ ಭರಪೂರ ವೀಕ್ಷಕರಿಗೆ ಮನರಂಜನೆ ನೀಡಿದ್ದ ಮಂಜು ಪಾವಗಡ ಅವರು ಬಿಗ್‍ಬಾಸ್ ಟ್ರೋಫಿ ಗೆಲ್ಲುವ ಮೂಲಕ ವಿಜಯದ ನಗೆ ಬೀರಿದ್ದಾರೆ. ಬಿಗ್ ಬಾಸ್ ಸೀಸನ್ 8 ರ ವಿನ್ನರ್ ರೇಸ್ ನಲ್ಲಿ  ಮಂಜು ಪಾವಗಡ ಅವರಿಗೆ 45,03,495 ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ 43,35,957 ಮತಗಳು ಲಭಿಸಿದವು. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯಾಗಿದೆ.

ಬಿಗ್‍ಬಾಸ್ ಫಿನಾಲೆಯಲ್ಲಿ ಟಾಪ್ 5 ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಮಂಜು, ಮತ್ತು ಅರವಿಂದ್ ಮಧ್ಯೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ನ  ಘೋಷಣೆ ಮಾಡಿದರು. ಬಿಗ್‍ ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. 

ಟಾಸ್ಕ್ ಮತ್ತು ಎಂಟರ್ ಟೈನ್ನೈಂಟ್ ಮಂಜು ಪಾವಗಡ ಅವರ ಪ್ಲಸ್ ಪಾಯಿಂಟ್ ಆಗಿತ್ತು. ರಂಗಭೂಮಿ ಹಿನ್ನಲೆಯುಳ್ಳ  ಮಂಜು ಅವರು,ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಮನೆಯ ಎಲ್ಲ ಸದಸ್ಯರು ಮತ್ತು ವೀಕ್ಷಕರ ಮನ ಗೆದ್ದಿದ್ದರು.ಉಳಿದಂತೆ ಮನೆಯ ತುಂಬೆಲ್ಲ ನಗುವಿನ ಹೊಳೆ ಹರಿಸಿದ್ದ ಮಂಜು ಪಾವಗಡ ಅರ್ಹವಾಗಿಯೇ ಗೆದ್ದು ಬೀಗಿದ್ದಾರೆ. ಮಂಜು ಇದ್ದಲ್ಲಿ ನಗುವಿಗೆ, ಮನರಂಜನೆಗೇನು ಕಮ್ಮಿ ಇಲ್ಲ ಎನ್ನುವ ಮಾತು ಬಿಗ್‍ಬಾಸ್ ವೀಕ್ಷಕರು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದರು. ಈ ಮಾತಿನಂತೆ ಮನರಂಜನೆ, ಟಾಸ್ಕ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಮಂಜು ಅವರು ಅತಿ ಹೆಚ್ಚು ವೋಟು ಪಡೆಯುವ ಮೂಲಕ ವಿನ್ನರ್ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!